Tuesday, April 22, 2025
Google search engine

Homeರಾಜ್ಯಬಿಜೆಪಿ ಜೊತೆಗೆ ನನ್ನ ಸಂಬಂಧ ನೂರಕ್ಕೆ ನೂರು ಮುಗಿದ ಅಧ್ಯಾಯ: ಗಾಲಿ ಜನಾರ್ದನ ರೆಡ್ಡಿ

ಬಿಜೆಪಿ ಜೊತೆಗೆ ನನ್ನ ಸಂಬಂಧ ನೂರಕ್ಕೆ ನೂರು ಮುಗಿದ ಅಧ್ಯಾಯ: ಗಾಲಿ ಜನಾರ್ದನ ರೆಡ್ಡಿ

ಬೆಂಗಳೂರು: ಬಿಜೆಪಿ ಜೊತೆಗೆ ನನ್ನ ಸಂಬಂಧ ನೂರಕ್ಕೆ ನೂರು ಮುಗಿದ ಅಧ್ಯಾಯ ಎಂದು ಗಂಗಾವತಿ ಕ್ಷೇತ್ರದ ಕೆಆರ್’​ಪಿಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ, ಬಿಜೆಪಿಗೆ ಮರಳಿ ಹೋಗುವುದನ್ನು ನಾನು ಕನಸು ಮನಸಿನಲ್ಲೂ ಯೋಚನೆ ಮಾಡಲ್ಲ. ಕೆಆರ್ ​ಪಿಪಿ ಪಕ್ಷ  ಸ್ಥಾಪಿಸಿದಾಗ ಎಷ್ಟೇ ಪ್ರಯತ್ನಿಸಿದರೂ ಯಾರ ಜೊತೆಗೂ ನಾನು ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ಸ್ವತಂತ್ರವಾಗಿಯೇ ನಾನು ಮುಂದೆ ಹೋಗುತ್ತೇನೆ ಎಂದರು.

ಲೋಕಸಭಾ ಚುನಾವಣೆ ದೃಷ್ಟಿಯಿಂದ ಯಾರೂ ನನ್ನ ಸಂಪರ್ಕ ಮಾಡಿಲ್ಲ, ನಾನೂ ಯಾರನ್ನೂ ಸಂಪರ್ಕ ಮಾಡಿಲ್ಲ.ನಾನು ಲೋಕಸಭಾ ಚುನಾವಣೆಗೆ ಸ್ಫರ್ಧೆ ಮಾಡುವುದಿಲ್ಲ. ಆದರೆ, ಎಂಟು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೆಲಸ ಮಾಡುತ್ತೇನೆ ಎಂದರು.

ಬಿಜೆಪಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ನನ್ನ ಸಹಾಯ ಕೇಳುವ ಪರಿಸ್ಥಿತಿ ಇಂದು ಇಲ್ಲ. ಯಡಿಯೂರಪ್ಪ ಅವರನ್ನು ತಂದೆಯ ಸ್ಥಾನದಲ್ಲಿ ಗೌರವಿಸಿದರೆ, ಶ್ರೀರಾಮುಲು ಅವರನ್ನು ಮಗು ರೂಪದಲ್ಲಿ ನೋಡುತ್ತೇನೆ. ಅವರು ಆಯಾ ಪಕ್ಷದಲ್ಲಿ ಚೆನ್ನಾಗಿರಲಿ ಎಂದು ಬಯಸುತ್ತೇನೆಯೇ ಹೊರತು ಆಹ್ವಾನ ಮಾಡಲ್ಲ ಎಂದರು.

ರಾಜಕೀಯಕ್ಕಾಗಿ ಕೌಟುಂಬಿಕ ಸಂಬಂಧ ಕಡಿದುಕೊಂಡ ವಿಚಾರವಾಗಿ ಮಾತನಾಡಿ, ರಾಜಕೀಯ, ಸಿದ್ಧಾಂತ ಇಟ್ಟುಕೊಂಡು ನಾನು ಹೋಗುವಾಗ ಯಾವ ಸ್ನೇಹ, ಸಂಬಂಧದ ಪ್ರಶ್ನೆ ಬರುವುದೇ ಇಲ್ಲ. ನನ್ನ ಯೋಚನೆ, ಯೋಜನೆಗಳೇ ಪ್ರತ್ಯೇಕವಾಗಿರುವಾಗ ನನ್ನ ಹಾದಿಯಲ್ಲೇ ನಾನು ಹೋಗುತ್ತೇನೆ. ಯಾರಿಗೆ ಯಾವ ಹಾದಿ ಇಷ್ಟ ಆಗುತ್ತದೋ ಆ ಹಾದಿಯಲ್ಲಿ ಅವರು ಹೋಗಬಹುದು ಎಂದರು.

RELATED ARTICLES
- Advertisment -
Google search engine

Most Popular