ಗುಂಡ್ಲುಪೇಟೆ: ಪಟ್ಟಣದ ಎಮ್.ಡಿ.ಸಿ.ಸಿ ಬ್ಯಾಂಕ್ ಮುಂಭಾಗ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಗೃಹರಕ್ಷಕ ದಳ ವಿಭಾಗದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ನಾರಾಯಣ್ ರವರಿಗೆ ಇಂದು ಸೇವೆಯನ್ನು ಗುರ್ತಿಸಿ ಸನ್ಮಾನ ವನ್ನ ಮಾಡಲಾಯಿತು.
ಕರ್ನಾಟಕ ಕಾವಲುಪಡೆ ವತಿಯಿಂದ ಇಂದು ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ರಾಜ್ಯಧ್ಯಕ್ಷರಾದ ಮೋಹನ್ ಗೌಡ,ತಾಲ್ಲೂಕು ಅಧ್ಯಕ್ಷ ಅಬ್ದುಲ್ ಮಾಲೀಕ್,ಮಾಡ್ರಳ್ಳಿ ಸುಭಾಷ್,ಸೋಮಣ್ಣ ಹಾಗೂ ಪಧಾದಿಕಾರಿಗಳು ಹಾಜರಿದ್ದರು.
