ಮಂಗಳೂರು (ದಕ್ಷಿಣ ಕನ್ನಡ):ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಗಾಯಕರು ಕೂಡಾ ಹೌದು..! ಯೆಸ್. ಅಚ್ಚರಿಯಾದರೂ ಇದು ಸತ್ಯ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮೂಲತಃ ತಮಿಳುನಾಡಿನವರು. ಮಂಗಳೂರಿನ ಗ್ರಾಂಡ್ ವೇ ಮರವೂರಲ್ಲಿ ನಡೆದ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿಯವರು ಕನ್ನಡ ಹಾಡನ್ನು ಹಾಡಿ ಎಲ್ಲರನ್ನು ಅಚ್ಚರಿಗೊಳಿಸಿದರು. ಇದೀಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಡಿರುವ ಕನ್ನಡ ಹಾಡಿನ ವೀಡಿಯೋ ವೈರಲ್ ಆಗುತ್ತಿದೆ.