ಬೆಂಗಳೂರು: ಸಂವಿಧಾನ ಕಾಯಕಲ್ಪ ಕಾರ್ಯಕ್ಕಾಗಿ ಅಸಿಸ್ಟೆಂಟ್ ಕಮಾಂಡ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಹೇಲ್ ಅಹಮದ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಹಾಗೂ ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಂವಿಧಾನದ ತತ್ವಗಳು ಅಪಾಯದಲ್ಲಿ ಇರುವುದರಿಂದ ಸಂವಿಧಾನ ಅವರಿಗೆ ಕೊಡುಗೆಯಾಗಿ ನೀಡಿರುವ ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಯನ್ನು, ದೇಶಕ್ಕೆ ಸಂವಿಧಾನ ಸಮರ್ಪಣೆಯಾದ ಅಂದರೆ 26/ 11/ 2023 ಈ ಮಹತ್ವದ ದಿನದಂದು ಸಂವಿಧಾನ ಕಾಯ ಕಲ್ಪ ಸಂಕಲ್ಪದೊಂದಿಗೆ ಅವರ ಹುದ್ದೆಯನ್ನು ಸಮರ್ಪಿಸಿ ರಾಜೀನಾಮೆ ನೀಡುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.
