ಮೈಸೂರು: ಜೆಎಸ್‌ಎಸ್ ಆಸ್ಪತ್ರೆ ಮತ್ತು ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಅಕಾಡೆಮಿಕ್ ಸೊಸೈಟಿ ಆಯೋಜಿಸಿದ್ದ ವಾರ್ಷಿಕ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಉಪನ್ಯಾಸಕ್ಕೆ ಚರ್ಮರೋಗ ವೈದ್ಯರಿಗೆ ಯಾವುದೇ ಗಡಿರೇಖೆ ಇಲ್ಲ ಎಂಬ ವಿಷಯದ ಬಗ್ಗೆ ಉಪನ್ಯಾಸವನ್ನು ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಉಪನ್ಯಾಸಕ ಆಗಮಿಸಿದ ಡಾ. ಸಿ.ಆರ್. ಶ್ರೀನಿವಾಸ್, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಚರ್ಮರೋಗ ವಿಭಾಗ, ಕಳಿಂಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಭುವನೇಶ್ವರ್, ಇವರು ಸುಮಾರು ಒಂದು ಗಂಟೆಗಳ ಕಾಲ ತಮ್ಮ ಉಪನ್ಯಾಸದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿ ಚರ್ಮರೋಗ ವೈದ್ಯರಿಗೆ ಯಾವುದೇ ಗಡಿರೇಖೆಗಳಲ್ಲಿ, ಗಡಿಯನ್ನು ದಾಟಿ ಸಂಶೋಧನೆಯ ವಿಷಯದ ಮೇಲೆ ಗಮನ ಕೇಂದ್ರಿಕರಿಸಬೇಕು ಮೂಲ ವಿಜ್ಞಾನಗಳ ಅನ್ವಯವು ವಿಷಯಕ್ಕೆ (ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರದಂತಹ ) ಆಯಾ ಪ್ರಮುಖ ವಿಷಯಗಳು ಸಂಶೋಧನಾ ಸಮಸ್ಯೆಗೆ ಉತ್ತರವನ್ನು ತಲುಪಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ರೋಗಿ ಮತ್ತು ವೈದ್ಯರ ಸಂಬಂಧವನ್ನು ಉತ್ತಮ ಗೊಳಿಸಲು ಬಹುಭಾಷ ಸಂವಹನದ ಅಗತ್ಯವಿದೆ, ಅಲರ್ಜಿಕ್ ಕಾಂಟ್ಯಾಕ್ಟ್ ಡರ್ಮಟೈಟಿಸ್ ಒಂದು ಸಾಮಾನ್ಯ ಚರ್ಮರೋಗ ಸಮಸ್ಯೆಯಾಗಿದೆ ಭಾರತದಲ್ಲಿನ ಸಂಶೋಧನೆಯು ಪ್ರಸ್ತುತ ಅದರ ಸಮಸ್ಯೆಯನ್ನು ಕಡಿಮೆ ಮಾಡಿದೆ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅಡ್ಡ ಸೋಂಕನ್ನು ತಡೆಗಟ್ಟಲು ಮೊಬೈಲ್ ಫೋನ್ ಬಳಕೆಯ ಬಗ್ಗೆ ತಿಳಿಸಿದರು, ಸೆಲ್ಫಿ ಸ್ಟಿಕ್ ಬಳಸಿ ಬಾಯಿಯ ಲೋಳೆಪೊರೆಯ ಪರಿಕ್ಷೆಯು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮತ್ತೊಂದು ಹೆಗ್ಗುರುತಾಗಿದೆ, ಜ್ಞಾನವು ಬರಿ ಪುಸ್ತಕ ಮತ್ತು ತರಗತಿಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ ಎಂದು ಅವರ ಯುವಕರ ಗಮನ ಸೆಳೆದರು.
ಮುಂದಿನ ಪೀಳಿಗೆಯ ಸಮಾಜಕ್ಕೆ ನೀಡಬೇಕಾದ ಕರ್ತವ್ಯಗಳು, ಜವಬ್ದಾರಿಗಳ ಬಗ್ಗೆ ಕಿರಿಯ ವೈದ್ಯರಿಗೆ ಸ್ಪೂರ್ತಿದಾಯಕ ಉಪನ್ಯಾಸ ನೀಡಿದ ಅವರು ತಮ್ಮ ಮಾತಿನುದ್ದಕ್ಕೂ ನಮ್ಮ ಜನರ ಅಗತ್ಯ ಹಾಗೂ ಅನುಕೂಲತೆಗಳಿಗನುಸಾರವಾಗಿ ಚಿಕಿತ್ಸಾ ವಿಧಾನದಲ್ಲಿ ನವೀನತೆ ಅಳವಡಿಸುವಂತೆ ಕರೆನೀಡಿದರು ನಿರಂತರ ಸಂಶೋಧನೆಗಳು ನಡೆಯುತ್ತಲೇ ಇರುತ್ತದೆ ನಮ್ಮ ಆಧುನಿಕತೆಯ ತಂತ್ರಜ್ಞಾನದ ತುಡಿತ ನಿರಂತರವಾಗಿರಬೇಕು, ಮನುಕುಲಕ್ಕೆ ಉಪಯುಕ್ತವಾಗುವ ಹೊಸಹೊಸ ಪ್ರಯೋಗಗಳು ಆವಿಷ್ಕಾರವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಜಯದೇವ್ ಬೆಟ್‌ಕೆರೂರ್, ಪ್ರಾಧ್ಯಾಪಕರು, ಡಾಕ್ಟರ್ ಮೋಪಿನ್ಸ್ ಮೆಡಿಕಲ್ ಕಾಲೇಜ್ ವೈನಾಡು, ಡಾ. ಕುಶಾಲಪ್ಪ, ಪಿ.ಎ ನಿಕಟಪೂರ್ವ ನಿರ್ದೇಶಕರು, ಜೆಎಸ್‌ಎಸ್ ಎಹೆಚ್‌ಇಆರ್, ಡಾ. ವೀರಣ್ಣ ಎಸ್, ಪ್ರಾಧ್ಯಾಪಕರು, ಚರ್ಮರೋಗ ವಿಭಾಗ, ಜೆಎಸ್‌ಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಡಾ. ಬಸವನಗೌಡಪ್ಪ, ಪ್ರಾಂಶುಪಾಲರು, ಜೆಎಸ್‌ಎಸ್ ಮೆಡಿಕಲ್ ಕಾಲೇಜು, ಡಾ. ಬಿ. ಮಂಜುನಾಥ್, ಕುಲಸಚಿವರು, ಡಾ. ಮಂಜುನಾಥ ಶೆಟ್ಟಿ, ಅಧ್ಯಕ್ಷರು ಅಕಾಡೆಮಿಕ್ ಸೊಸೈಟಿ,ಡಾ. ಕಾಂತರಾಜು ಜಿ.ಆರ್. ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಚರ್ಮರೋಗ ವಿಭಾಗ, ಡಾ. ಅಶೋಕ್. ಪಿ. ಕಾರ್ಯದರ್ಶಿಗಳು ಅಕಾಡೆಮಿಕ್ ಸೊಸೈಟಿ, ಶ್ರೀ ಸತೀಶ್ ಚಂದ್ರ ಆಡಳಿತಾಧಿಕಾರಿಗಳು ಇವರುಗಳು ಉಪಸ್ಥಿತರಿದ್ದರು.
ಉಪನ್ಯಾಸ ಕಾರ್ಯಕ್ರಮಕ್ಕೆ ಜೆಎಸ್‌ಎಸ್ ಮೆಡಿಕಲ್ ಕಾಲೇಜು, ಮಂಡ್ಯ ಮೆಡಿಕಲ್ ಕಾಲೇಜು, ಮೈಸೂರು ಮೆಡಿಕಲ್ ಕಾಲೇಜಿನ ಅಧ್ಯಾಪಕರುಗಳು, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು.