ಮಂಗಳೂರು: ಮೂಡುಬಿದ್ರಿಯಲ್ಲಿರುವ ಆಳ್ವಾಸ್ ಎಜುಕೇಶನ್ ಫೌಂಡೇಶನ್ ವತಿಯಿಂದ ನಡೆಸಲಾಗುವ ವಿರಾಸತ್ ೨೦೨೩ ಇಂಟರ್ನ್ಯಾಷನಲ್ ವೈಟ್ ಲೈಫ್ ಫೋಟೋಗ್ರಾಫಿ ಕಾಂಪಿಟೇಶನ್ ನಲ್ಲಿ ಮೈಸೂರಿನ ಪತ್ರಿಕಾ ಛಾಯಾಗ್ರಾಹಕ ಹಾಗೂ ವನ್ಯಜೀವಿ ಛಾಯಾಗ್ರಾಹಕ ಎಸ್‌ಆರ್ ಮಧುಸೂದನ್ ರವರ ಬಾರ್ರ್ನ್ ಔಲ್ BARN OWL ಛಾಯಾಚಿತ್ರಕ್ಕೆ ಮೊದಲನೆಯ ಪ್ರಶಸ್ತಿ ದೊರೆತಿದ್ದು ಈ ಸ್ಪರ್ಧೆಯಲ್ಲಿ ವಿವಿಧ ದೇಶಗಳು ಹಾಗೂ ರಾಜ್ಯಗಳಿಂದ ೬೪೦ ಮಂದಿ ಸ್ಪರ್ಧಿಗಳು ೨೨೬೦ ಛಾಯಾ ಚಿತ್ರಗಳಲ್ಲಿ ಎಸ್ ಆರ್ ಮಧುಸೂದನ್ ರವರ ಛಾಯಾಚಿತ್ರಕ್ಕೆ ಮೊದಲನೆಯ ಪ್ರಶಸ್ತಿ ಸಿಕ್ಕಿರುವುದು ಪ್ರಶಂಸನಿಯಾ ಹಾಗೂ ಈ ಸ್ಪರ್ಧೆಯ ಪ್ರಶಸ್ತಿ ವಿತರಣೆ ಹಾಗೂ ಛಾಯಾಚಿತ್ರ ಪ್ರದರ್ಶನವು ಡಿಸೆಂಬರ್ ೧೪ರಿಂದ ಡಿಸೆಂಬರ್ ೧೭ರ ವರೆಗೆ ಮೂಡುಬಿದ್ರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಸಭಾಂಗಣದಲ್ಲಿ ನಡೆಯಲಿದೆ .