ಗುಜರಾತ್: ೨೩೦ಕ್ಕೂ ಹೆಚ್ಚು ತಾಲೂಕುಗಳಲ್ಲಿ ಗುಡುಗು ಸಹಿತ ಅಕಾಲಿಕ ಮಳೆಯಾಗಿದೆ. ಸಿಡಿಲು ಬಡಿದು ಅಪ್ರಾಪ್ತರು ಸೇರಿದಂತೆ ಸುಮಾರು ೨೦ ಮಂದಿ ಸಾವನ್ನಪ್ಪಿದ್ದು, ಒಂಬತ್ತುಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯಲ್ಲಿ ೨೨ ವರ್ಷದ ಯುವಕ ಬೈಕ್‌ನಲ್ಲಿ ಪ್ರಯಾಣಿಸುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಇನ್ನು ಮೆಹ್ಸಾನಾ ಜಿಲ್ಲೆಯಲ್ಲಿ ಆಟೋರಿಕ್ಷಾ ಮೇಲೆ ಮರ ಬಿದ್ದು ೨೯ ವರ್ಷದ ಯುವಕ ಮೃತಪಟ್ಟಿದ್ದಾನೆ. ದಹೋದ್‌ನಲ್ಲಿ ಮೂವರು ಮತ್ತು ಭರೂಚ್‌ನಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದರೆ, ಇದರ ಜತೆಗೆ ತಾಪಿ ಜಿಲ್ಲೆಯಲ್ಲಿ ಇಬ್ಬರು ಮತ್ತು ಸಬರ್ಕಾಂತ, ಅಹಮದಾಬಾದ್, ಮೆಹ್ಸಾನಾ, ಅಮ್ರೇಲಿ, ಬೊಟಾಡ್, ಪಂಚಮಹಲ್, ಖೇಡಾ, ಸೂರತ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಕೆಲವು ಕಡೆ ಸಿಡಿಲಿನ ಅಬ್ಬರಕ್ಕೆ ೪೦ಕ್ಕೂ ಹೆಚ್ಚು ದನ, ಕುರಿಗಳೂ ಸಾವನ್ನಪ್ಪಿವೆ. ಸೂರತ್ ಜಿಲ್ಲೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ.
ಈ ಎಲ್ಲ ಮೃತರು ತಮ್ಮ ಕೃಷಿ ಚಟುವಟಿಕೆಯಲ್ಲಿದ್ದಾಗ ಅಥವಾ ಹೊರಗೆ ಕೆಲಸದಲ್ಲಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೂರತ್ ಮತ್ತು ನವಸಾರಿ ಕರಾವಳಿ ಜಿಲ್ಲೆಗಳಾದ ಜುನಾಗಢ್, ಗಿರ್ ಸೋಮನಾಥ್, ಭಾವನಗರ, ಅಮ್ರೇಲಿ, ರಾಜ್‌ಕೋಟ್ ಮತ್ತು ಬೊಟಾಡ್ ಇಂದು ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಅಹಮದಾಬಾದ್, ತಾಪಿ, ಡ್ಯಾಂಗ್, ಛೋಟಾ ಉದೇಪುರ್ ಮತ್ತು ದಾಹೋಡ್‌ನಲ್ಲಿ ಸೋಮವಾರದವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸೋಮವಾರವೂ ಮಳೆಯಾಗಲಿದೆ. ಮಂಗಳವಾರದಿಂದ ರಾಜ್ಯವು ಶುಷ್ಕ ಹವಾಮಾನವನ್ನು ಅನುಭವಿಸುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.