ತುಮಕೂರು: ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.
ಮೃತನ ಸಹೋದರ ಕಲಂದರ್ ಸಾಬ್ ನಿಂದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಮೊದಲ ಎಫ್ಐಆರ್ ನಲ್ಲಿ ಐಪಿಸಿ ಸೆಕ್ಷನ್ 302, 109, 34 ಅಡಿಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದರೆ, ಎರಡನೇ ಎಫ್ಐಆರ್ ನಲ್ಲಿ ಐಪಿಸಿ ಸೆಕ್ಷನ್ 305, 306, 34 ಅಡಿ ಬಡ್ಡಿ ದಂಧೆ ಹಾಗೂ ಕಿರುಕುಳ ಆರೋಪದಡಿ ಕಲ್ಲಂದರ್, ಸಾನಿಯಾ, ಶಾಬಾಜ್, ಶಬಾನಾ, ಸಾನಿಯಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ವೀಡಿಯೋ ಹೇಳಿಕೆ ಆಧರಿಸಿ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.
ಗರೀಬ್ ಸಾಬ್ ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ವ್ಯವಹಾರಕ್ಕಾಗಿ ಸಾಲ ಮಾಡಿದ್ದ. ಸಾಲ ಕೊಟ್ಟವರ ಬಳಿ ಗರಿಬ್ ಸಾಬ್ ವಿರುದ್ಧ ಆರೋಪಿಗಳಾದ ಕಲ್ಲಂದರ್, ಕಲ್ಲಂದರ್ ಪುತ್ರಿ ಸಾನಿಯಾ ಛಾಡಿ ಹೇಳಿದ್ದರು.
ಬಡ್ಡಿಗಾಗಿ ಗರೀಬ್ ಸಾಬ್ ಗೆ ಕಲ್ಲಂದರ್ ಹಾಗೂ ಆರೋಪಿಗಳು ಸಾಲ ಕೊಡಿಸಿದ್ದರು. ಸಾಲದ ಕಂತು ಕಟ್ಟುವಂತೆ ಆರೋಪಿಗಳು ಪದೇ ಪದೇ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಐವರಿಗೂ ಶಿಕ್ಷೆ ನೀಡಬೇಕೆಂದು ಮೃತರು ಮನವಿ ಮಾಡಿದ್ದರು.
ಸದ್ಯ ಐವರು ಆರೋಪಿಗಳನ್ನ ವಶಕ್ಕೆ ಪಡೆದಿರುವ ತಿಲಕ್ ಪಾರ್ಕ್ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.