ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯ ಸೈಂಟ್ ಜೋಸೆಫ್ ಮಲಂಕರ ಚರ್ಚ್ ಪರಿಸರದಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷಗೊಂಡಿತು. ಇದನ್ನು ಸೆರೆ ಹಿಡಿದ ಉರಗ ತಜ್ಞ ಕೆ. ಝಕರಿಯ್ಯ ಎಂಬುವವರು ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಎರಡು- ಮೂರು ದಿನಗಳಿಂದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ನೆಲ್ಯಾಡಿಯ ಸೈಂಟ್ ಜೋಸೆಫ್ ಮಲಂಕರ ಚರ್ಚ್ ಪರಿಸರದಲ್ಲಿ ಸುತ್ತಾಡಿಕೊಂಡಿತ್ತು. ಈ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿಯ ಕೆ. ಝಕರಿಯಾ ಅವರು ಅಲ್ಲಿಗೆ ತೆರಳಿ ಸುಮಾರು ಒಂದು ಗಂಟೆಯಷ್ಟು ಕಾರ್ಯಾಚರಣೆಯ ಬಳಿಕ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಗುಂಡ್ಯ ಬಳಿ ದಟ್ಟಾರಣ್ಯಕ್ಕೆ ಬಿಟ್ಟಿದ್ದಾರೆ.