Sunday, April 20, 2025
Google search engine

Homeಅಪರಾಧತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಅಜ್ಜನನ್ನೇ ಕೊಂದ ಮೊಮ್ಮಗ

ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಅಜ್ಜನನ್ನೇ ಕೊಂದ ಮೊಮ್ಮಗ

ಕಲಬುರಗಿ: ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಅಜ್ಜನನ್ನೇ ಮೊಮ್ಮಗನೊಬ್ಬ ಕೊಲೆ ಮಾಡಿದ ಘಟನೆ ಕಲಬುರಗಿ ತಾಲೂಕಿನ ಜವಳಗಾ ಬಿ ಗ್ರಾಮದಲ್ಲಿ ನಡೆದಿದೆ.

ಸಿದ್ರಾಮಪ್ಪ ಕಾಮನ್ (75) ಕೊಲೆಯಾದ ದುರ್ದೈವಿ.

ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿ ಆಕಾಶ್ ಕಾಮನ್ (22) ಎಂಬಾತನನ್ನು ಬಂಧಿಸಲಾಗಿದೆ.

ನಿನ್ನೆ(ನ.27) ಸಿದ್ರಾಮಪಪ್ಪ ಸಹೋದರಿ ಸಾವನ್ನಪ್ಪಿದ ಹಿನ್ನಲೆ ಸಿದ್ರಾಮಪಪ್ಪ ಕುಟುಂಬ ಮತ್ತು ಸರೋಜಾ ಕುಟುಂಬ ಕಲಬುರಗಿ ತಾಲ್ಲೂಕಿನ ಕುಮಿಸಿ ಗ್ರಾಮಕ್ಕೆ ತೆರಳಿದ್ದರು. ಕ್ರೂಸರ್ ವಾಹನದಲ್ಲಿ ವಾಪಸ್ ಬರುವಾಗ ಸರೋಜಾ ಅವರು ಸಿದ್ರಾಮಪಪ್ಪನಿಗೆ ಗಾಡಿಯ ಮೇಲೆ ಕೂರುವಂತೆ ಹೇಳಿದ್ದರು. ವಯಸ್ಸಾದವನಿಗೆ ಗಾಡಿಯ ಮೇಲೆ ಕೂರುವಂತೆ ಹೇಳಿದಕ್ಕೆ ಸಿದ್ರಾಮಪ್ಪ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರು. ಈ ವಿಷಯವನ್ನು ಸರೋಜಾ ತನ್ನ ಮಗನಿಗೆ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಮಗ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

RELATED ARTICLES
- Advertisment -
Google search engine

Most Popular