Sunday, April 20, 2025
Google search engine

Homeರಾಜ್ಯಹಣಕಾಸು ವಿಚಾರಕ್ಕೆ ವೈಷಮ್ಯ: ಸ್ನೇಹಿತನ ಕೊಲ್ಲಲು ಹೋಗಿ ಆಟೋ ಚಾಲಕನನ್ನು ಕೊಲೆಗೈದ ವ್ಯಕ್ತಿ

ಹಣಕಾಸು ವಿಚಾರಕ್ಕೆ ವೈಷಮ್ಯ: ಸ್ನೇಹಿತನ ಕೊಲ್ಲಲು ಹೋಗಿ ಆಟೋ ಚಾಲಕನನ್ನು ಕೊಲೆಗೈದ ವ್ಯಕ್ತಿ

ಕಾರವಾರ: ಹಣಕಾಸು ವಿಚಾರಕ್ಕೆ ಮನಸ್ತಾಪ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಮಾಜಿ ಸ್ನೇಹಿತನನ್ನು ಹತ್ಯೆಗೈಯ್ಯುವ ಪ್ರಯತ್ನ ಫಲಿಸದೇ ರಸ್ತೆ ಬದಿ ನಿಂತಿದ್ದ ಆಟೊ ಚಾಲಕನ ಮೇಲೆ ಲಾರಿ ಹರಿಸಿ ಹತ್ಯೆ ಮಾಡಿರುವ  ಘಟನೆ ಹೊನ್ನಾವರ ತಾಲ್ಲೂಕಿನ ಅರೆಅಂಗಡಿಯ ಜನತಾ ಕಾಲೊನಿ ಬಳಿ ಮಂಗಳವಾರ ಸಂಜೆ ನಡೆದಿದೆ.

ಜನತಾ ಕಾಲೊನಿಯ ಓಲ್ವಿನ್ ಲೋಬೊ (31) ಹತ್ಯೆಯಾದವರು. ಹಡಿನಬಾಳ ಗ್ರಾಮದ ವಿನಾಯಕ ನಾರಾಯಣ ಭಟ್ (40) ಹತ್ಯೆಗೈದ ಆರೋಪಿ.

ವಿನಾಯಕ ಮತ್ತು ಸಾಲ್ಕೋಡ ಗ್ರಾಮದ ಜನಾರ್ಧನ ನಾಯ್ಕ ನಡುವೆ ಹಣಕಾಸು ವಿಚಾರಕ್ಕೆ ವೈಷಮ್ಯವಿತ್ತು.

ಜನತಾ ಕಾಲೊನಿ ಬಳಿ ಆಟೊ ಚಾಲಕನೊಂದಿಗೆ ಜನಾರ್ಧನ್  ಮಾತನಾಡುತ್ತಿದ್ದ ವೇಳೆ ಅವರನ್ನು ಹತ್ಯೆಗೈಯ್ಯುವ ಸಂಚಿನಿಂದ ಲಾರಿಯನ್ನು ವೇಗವಾಗಿ ಚಲಾಯಿಸಿಕೊಂಡು ಬಂದ ಆರೋಪಿಯು ಆಟೊ ಮೇಲೆಯೆ ಲಾರಿ ನುಗ್ಗಿಸಿದ್ದ. ಇದರಿಂದ ಆಟೊ ಚಾಲಕ ಸ್ಥಳದಲ್ಲೇ ಮೃತಪಟ್ಟರೆ, ಜನಾರ್ಧನ್ ಮತ್ತು ಆತನ ಸ್ನೇಹಿತ ವಸಂತ ನಾಯ್ಕ ಗಾಯಗೊಂಡಿದ್ದಾರೆ ಎಂದು ಹೊನ್ನಾವರ ಠಾಣೆ ಪೊಲೀಸರು ಘಟನೆ ವಿವರಿಸಿದರು.

RELATED ARTICLES
- Advertisment -
Google search engine

Most Popular