ಕನಕಪುರ: ದರೋಡೆ ಮಾಡಲು ಮಾರಕಾಸ್ತ್ರಗಳನ್ನು ಹಿಡಿದು ಹೊಂಚು ಹಾಕುತ್ತಿದ್ದ ನಾಲ್ವರು ಆರೋಪಿಗಳನ್ನು ಸಾತನೂರು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಾತನೂರು ಗ್ರಾಮದ ಸಾಯಿಲ್ ಪಾಷಾ ಜಂಗ್ಲಿ ಬಿನ್ ನವಾಜ್ ಪಾಶ (20, ಹನುಮಂತನಗರ ಕುಮಾರ ಅಲಿಯಾಸ್ ಕುಕ್ಕಿ ಬಿನ್ ಸ್ವಾಮಿ(24), ಕಬ್ಬಾಳು ಗ್ರಾಮದ ದೀಪು ಅಲಿಯಾಸ್ ಚಳ್ಳೆ ಬಿನ್ ಬಸವರಾಜು (21), ನಾಗರಸನ ಕೋಟೆ ಗ್ರಾಮದ ಯೋಗೇಶ್ ಅಲಿಯಾಸ್ ಕೋಟೆ ಬಿನ್ ವೆಂಕಟೇಶ್(19)ಬಂದಿತ ಆರೋಪಿಗಳು ಎಂದು ತಿಳಿದುಬಂದಿದೆ.
ತಲೆಮೆರೆಸಿಕೊಂಡಿರುವ ದೊಡ್ಡ ಹಾಲಳ್ಳಿ ಗ್ರಾಮದ ಡಿಕೆ ಶಿವನಗರದ ರಾಮು ಅಲಿಯಾಸ್ ಕಣ್ಣ ಬಿನ್ ಮುನಿಯೊ ಬೋವಿ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ತಾಲೂಕಿನ ಸಾತನೂರು ಹೋಬಳಿಯ ಗೊಲ್ಲರ ದೊಡ್ಡಿ ಬಸ್ ನಿಲ್ದಾಣದ ಬಳಿ ಹಾದುಹೋಗುವ ಸಾತ ನೂರು ಮತ್ತು ಚನ್ನಪಟ್ಟಣ ರಸ್ತೆಯಲ್ಲಿ ಬೆಳಗಿನ ಜಾವ ನಾಲ್ಕು ಗಂಟೆ ಸಮಯದಲ್ಲಿ ಐದು ಜನ ಆರೋಪಿಗಳು ಮಾರಕಾಸ್ತ್ರಗಳನ್ನು ಹಿಡಿದು ದರೋಡೆ ಮಾಡಲು ಹೊಂಚೆ ಹಾಕುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಾತನೂರು ಪಿಎಸ್ ಐ ಹರೀಶ್ ಎ ಎಸ್ ಐ ದುರ್ಗೆ ಗೌಡ ಸಿಬ್ಬಂದಿಗಳಾದ ಶೇಖರ್ ರಾಜಭಕ್ಷ ಕುರಹಟ್ಟಿ ಕೊಟ್ರೇಶ್ ಭಜಂತ್ರಿ ತಂಡ ಕಾರ್ಯಚರಣೆಗಳಿಂದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಓರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ .