ಕೆ.ಆರ್.ನಗರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೆ.ಆರ್.ನಗರ ಘಟಕದ ನೌಕರರು “ಕುರುಕ್ಷೇತ್ರ ಅಥವಾ ದುರ್ಯೋಧನನ” ಎಂಬ ಪೌರಾಣಿಕ ನಾಟಕವನ್ನು ಪಟ್ಟಣದ ಪುರಸಭೆಯ ಬಯಲು ರಂಗ ಮಂದಿರದಲ್ಲಿ ಅಭಿನಯಿಸಿದರು. ನಾಟಕದ ಪಾತ್ರಧಾರಿಗಳ ಬಂಧು ವರ್ಗದವರು, ನೌಕರರು ಮತ್ತು ಪಟ್ಟಣದ ಜನತೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಕಲಾಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಬೆಳಗಿನ ಜಾವ ೫ ಗಂಟೆಯವರೆಗೆ ನಡೆದ ನಾಟಕವನ್ನು ವೀಕ್ಷಿಸಿದರು.
ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ದೀಪ ಬೆಳಗಿಸುವ ಮೂಲಕ ನಾಟಕಕ್ಕೆ ಚಾಲನೆ ನೀಡಿದರು. ಆನಂತರ ಮಾತನಾಡಿದ ಅವರು ಪೌರಾಣಿಕ ನಾಟಕಗಳು ಮನುಷ್ಯನ ಬದುಕಿಗೆ ಹತ್ತಿರವಾಗಿವೆ ಆದ್ದರಿಂದ ಗ್ರಾಮೀಣ ಭಾಗದ ಜನತೆ ಆಗ್ಗಿಂದ್ದಾಗೆ ನಾಟಕಗಳನ್ನು ಪ್ರದರ್ಶಿಸಿ ಯುವ ಜನತೆಗೆ ಇತಿಹಾಸವನ್ನು ತಿಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ರಾಮಾಯಣ ಮತ್ತು ಮಹಾಭಾರತದ ಬಗ್ಗೆ ನಾಟಕಗಳ ಮೂಲಕವೇ ಜನರು ಸುಲಭವಾಗಿ ತಿಳಿದಿದ್ದಾರೆ ಅದಕ್ಕಾಗಿ ನಾಟಕಗಳನ್ನು ಅಭಿನಯಿಸಬೇಕು ಎಂದು ಮನವಿ ಮಾಡಿದ ದೊಡ್ಡಸ್ವಾಮೇಗೌಡ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದ ನಂತರ ಸಾರಿಗೆ ಸಂಸ್ಥೆಯ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ ಇಂತಹಾ ಸಂದರ್ಭದಲ್ಲೂ ನಾಟಕ ಕಲಿತು ಅಭಿನಯಿಸುತ್ತಿರುವ ಎಲ್ಲಾ ಪಾತ್ರಧಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಹೆಬ್ಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್, ಪತ್ರಕರ್ತ ಎಂ.ಎಸ್.ರವಿಕುಮಾರ್ ಸೇರಿದಂತೆ ನಾಟಕಕ್ಕೆ ಪ್ರೋತ್ಸಹ ನೀಡ ನೀಡಿದವರನ್ನು ಸನ್ಮಾನಿಸಲಾಯಿತು.
ಸಾರಿಗೆ ಸಂಸ್ಥೆ ಆಡಳಿತಾಧಿಕಾರಿ ಸಿ.ಟಿ.ಮಂಜುನಾಥ್, ಸಂಚಲ ಅಧಿಕಾರಿ ದಿನೇಶ್‌ಕುಮಾರ್, ಎಂ.ಪಿ.ರಘು, ಘಟಕ ವ್ಯವಸ್ಥಾಪಕ ಪಿ.ಮಹೇಶ್, ಹೆಚ್.ಡಿ.ಕೋಟೆ ಘಟಕ ವ್ಯವಸ್ಥಾಪಕ ಮಹದೇವಪ್ರಸಾದ್, ಕಾರ್ಮಿಕ ಕಲ್ಯಾಣಾಧಿಕಾರಿ ಪುಟ್ಟೇಗೌಡ, ನಾಟಕ ನಿರ್ದೇಶಕರು ಆದ ನಿರ್ವಹಕ ಡಿ.ಮಂಜುನಾಥ್ ಮತ್ತಿತರರು ಹಾಜರಿದ್ದರು.