Sunday, April 20, 2025
Google search engine

Homeಅಪರಾಧಕಾನೂನುಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ  14 ದಿನಗಳ ನ್ಯಾಯಾಂಗ ಬಂಧನ

ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ  14 ದಿನಗಳ ನ್ಯಾಯಾಂಗ ಬಂಧನ

ತುಮಕೂರು: ಸಾಲಬಾಧೆಗೆ ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

ಆರೋಪಿಗಳಾದ ಖಲಂದರ್(45) ಪತ್ನಿ ಜರೀನಾ(38) ನ್ಯಾಯಾಂಗ ಬಂಧನಕ್ಕೆ ಒಳಗಾದವರು.

ಕಳೆದ ಭಾನುವಾರ ಸದಾಶಿವನಗರದ ಬಾಡಿಗೆ ಮನೆಯಲ್ಲಿ ಗರೀಬ್ ಸಾಬ್ ದಂಪತಿ ಸಾವಿಗೆ ಶರಣಾಗಿದ್ದರು. ಒಟ್ಟು ಐವರು ಆರೋಪಿಗಳ ಹೆಸರನ್ನು ಡೆತ್ ನೋಟಿನಲ್ಲಿ ಮೃತ ಗರೀಬ್‌ ಸಾಬ್ ಬರೆದಿದ್ದರು.

ಪ್ರಕರಣದಲ್ಲಿ ಖಲಂದರ್’ನ ಮಕ್ಕಳಾದ ಶಹಬಾಜ್, ಇಬ್ಬರು  ಬಾಲಕಿಯರಿಗೆ ಕೋರ್ಟ್ ರಿಲೀಫ್ ನೀಡಿದೆ.

RELATED ARTICLES
- Advertisment -
Google search engine

Most Popular