ಕೆ.ಆರ್.ಪೇಟೆ: ಒತ್ತುವರಿಯಾಗಿರುವ ರಸ್ತೆಯನ್ನು ತೆರವುಗೊಳಿಸಿಕೊಡಬೇಕೆಂದು ಕೆ.ಆರ್.ಪೇಟೆ ತಾಲ್ಲೋಕಿನ ಸಂತೇಬಾಚಹಳ್ಳಿ ಹೋಬಳಿಯ ಜಾಗಿನಕೆರೆ ಗ್ರಾಮಸ್ಥರು ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿರವರಿಗೆ ಮನವಿ ಸಲ್ಲಿಸಿದರು.
ಸುಮಾರು ನೂರಾರು ಎಕರೆ ಜಮೀನಿಗೆ ಹೋಗುವ ರಸ್ತೆಗೆ ಹಿಂದೆ ತಿಪಟೂರು ರಸ್ತೆ ಎಂಬ ಹೆಸರಿನ ದೊಡ್ಡರಸ್ತೆ ಇತ್ತು ರಸ್ತೆ ಇತ್ತೀಚೆಗೆ ರಸ್ತೆಯ ಆಜುಬಾಜುದಾರರು ಒತ್ತುವರಿ ಮಾಡಿಕೊಂಡಿರುವುದರಿಂದ ೮೦ ಅಡಿ ಇದ್ದರಸ್ತೆ ಈಗ ರಸ್ತೆ ೧೦ ಅಡಿಗೆ ಬಂದು ನಿಂತಿದೆ ಆದುದರಿಂದ ಒತ್ತುವರಿಯಾದ ರಸ್ತೆಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ತೆರವುಗೊಳಿಸಿಕೊಡಬೇಕಾಗಿ ಜಾಗಿನಕೆರೆ ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿದ್ದಾರೆ.