ತುಮಕೂರು: ದನದ ಕೊಟ್ಟಿಗೆ ಲೋನ್ ಕೊಡದೆ ನಾಲ್ಕು ವರ್ಷಗಳಿಂದ ಪಿಡಿಒ ಸತಾಯಿಸುತ್ತಿರುವುದಕ್ಕೆ ಆಕ್ರೋಶಗೊಂಡ ರೈತನೋರ್ವ ಗ್ರಾಪಂ ಕಚೇರಿ ಒಳಗೆ ಹಸು ಕಟ್ಟಿ ಪ್ರತಿಭಟಿಸಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಸಾಸಲುಕುಂಟೆ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.
ಅಧಿಕಾರಿಗಳ ಬೇಜವಬ್ದಾರಿಗೆ ಬೇಸತ್ತ ರೈತ ಗೋಪಾಲಯ್ಯ ಹಸು ತಂದು ಕಟ್ಟಿಹಾಕಿ ಪ್ರತಿಭಟಿಸಿದ್ದಾರೆ.

ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಿಸಿಕೊಳ್ಳಲು ಗ್ರಾಪಂಗೆ ನಾಲ್ಕು ವರ್ಷಗಳಿಂದಲೂ ಗೋಪಾಲಯ್ಯ ಅಲೆಯುತ್ತಿದ್ದಾರೆ.
ಪ್ರಭಾವಿಗಳ ಮನೆ ಬಾಗಿಲಿಗೆ ಬಿಲ್ ಮಾಡಿಕೊಡಲಾಗುತ್ತೆ. ಬಡವರನ್ನ ಹೀಗೆ ಅಲೆದಾಡಿಸುತ್ತಾರೆ. ಹೇಳೋರು-ಕೇಳೋರು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.