ತಾಂಡವಪುರ: ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಶ್ರೀ ಭಕ್ತ ಕನಕದಾಸರ 536 ನೇ ವರ್ಷದ ಜಯಂತಿಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ನಾಗಮ್ಮ ರವರು ಶ್ರೀ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು ಬಳಿಕ ಗ್ರಾಮ ಪಂಚಾಯಿತಿ ಸದಸ್ಯ ಸಿಎನ್ ಚಂದ್ರು ಮಾತಾಡಿ ಶ್ರೀ ಭಕ್ತ ಕನಕದಾಸರು ಬಸವಣ್ಣನವರು ವಾಲ್ಮೀಕಿ ಅವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಸಮ ಸಮಾಜದ ಅಸಮತೋಲನವನ್ನು ಹೋಗಲಾಡಿಸಿ ಸಮಸಮಜೆಗಳಲ್ಲಿ ಶಾಂತಿ ಇಳಿಸುವಂತೆ ಹೋರಾಡಿದಂತ ಮಹಾ ನಾಯಕರು ಅವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗಮ ಪಿಡಿಒ ಪ್ರಕಾಶ್ ಗ್ರಾಮ ಪಂಚಾಯತಿ ಸದಸ್ಯರಾದ ಪ್ರಭು ಅಡಕನಹಳ್ಳಿ ಮಾದಪ್ಪ ಚಂದ್ರು ನಟರಾಜು ಭಾಗ್ಯಮ್ಮ ಗ್ರಾಮ ಪಂಚಾಯತಿಯ ಪುಟ್ಟರಾಜು ಪೌರಕಾರ್ಮಿಕರು ಹಾಜರಿದ್ದರು.