Sunday, April 20, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ:ಭಕ್ತ ಕನಕದಾಸರ ಜಯಂತಿ ಆಚರಣೆ

ಕೆ.ಆರ್.ನಗರ:ಭಕ್ತ ಕನಕದಾಸರ ಜಯಂತಿ ಆಚರಣೆ

ಕೆ.ಆರ್.ನಗರ: ಸರ್ಕಾರ ಜಾರಿಗೆ ತಂದಿರುವ ಮಹನೀಯರ ಎಲ್ಲಾ ಜಯಂತಿಗಳನ್ನು ಒಂದೇ ವೇದಿಕೆಯಲ್ಲಿ ಆಚರಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಬೇಕೆಂದು ನಿರ್ಧರಿಸಲಾಗಿದ್ದು ಇದಕ್ಕೆ ಒಪ್ಪಿಗೆ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ತಾಲೂಕು ಕಛೇರಿ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಮತ್ತು ತಾಲೂಕು ಕುರುಬರ ಸಂಘದ ಸಂಯುಕ್ತಾಶ್ರದಲ್ಲಿ ನಡೆದ ಭಕ್ತ ಕನಕದಾಸರ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆದರ್ಶ ಪುರುಷರ ಅನ್ವಯಿಗಳು ಮಾತ್ರ ಜಯಂತಿ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ ಆದ್ದರಿಂದ ಒಟ್ಟಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ಸಮ ಸಮಾಜ ನಿರ್ಮಾಣ ಮಾಡಲು ತಮ್ಮ ಜೀವನವನ್ನೇ ಮುಡುಪಾಗಿಟ್ಟ ಕನಕದಾಸರು, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಇನ್ನಿತರ ಮಹಾತ್ಮರನ್ನು ಜಾತಿಗೆ ಸೀಮಿತ ಮಾಡುತ್ತಿರುವುದು ಅವರಿಗೆ ಮಾಡಿದ ಅಪಮಾನ ಎಂದರಲ್ಲದೆ ಸಮಾಜಕ್ಕಾಗಿ ದುಡಿದಂತಹಾ ಮಹನೀಯರ ಜಯಂತಿಗಳನ್ನು ಎಲ್ಲರೂ ಸೇರಿ ಆಚರಣೆ ಮಾಡಬೇಕು ಎಂದು ಮನವಿ ಮಾಡಿದರು.
ರಾಷ್ಟç ಕವಿ ಕುವೆಂಪುರವರು ಹೇಳಿದಂತೆ ಸರ್ವ ಜನಾಂಗದ ತೋಟ ನಿರ್ಮಿಸಲು ನನ್ನ ಅಧಿಕಾರವಧಿಯಲ್ಲಿ ಪ್ರಯತ್ನಿಸುತ್ತೇನೆ ಎಂದ ಶಾಸಕ ಡಿ.ರವಿಶಂಕರ್ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಸಮಗ್ರ ಅಭಿವೃದ್ದಿಗಾಗಿ ಸರ್ವರೂ ಸಹಕಾರ ನೀಡಬೇಕು ಎಂದು ಕೋರಿದಲ್ಲದೆ ಕನಕದಾಸರು ಹೇಳಿದಂತೆ ನಾನು ಎಂಬುವುದು ಹೋಗಿ ನಾವು ಎಂದು ನಡೆದುಕೊಂಡಾಗ ದೇವರ ಬಳಿ ಹೋಗುತ್ತೇವೆ ಎಂದಿದ್ದಾರೆ ಈ ಹಾದಿಯಲ್ಲಿ ನಾನು ಸಾಗುತ್ತೇನೆ ಎಂದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಚರ‍್ನಹಳ್ಳಿಶಿವಣ್ಣ ಮಾತನಾಡಿ ಕನಕದಾಸರ ಜಯಂತಿ ಆಚರಣೆಯಲ್ಲಿ ಸರ್ವ ಜನಾಂಗದವರು ಪಾಲ್ಗೊಳ್ಳಬೇಕು ಎಂದು ಸಂಘ ಮಾಡಿದ ಮನವಿಗೆ ಸ್ಪಂದಿಸಿ ಬಂದಿರುವ ಎಲ್ಲಾ ಮುಖಂಡರಿಗೂ ಕೃತಜ್ಞತೆ ಸಲ್ಲಿಸದ ಅಧ್ಯಕ್ಷರು ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಿದಂತೆ ಸರಳ ಮತ್ತು ಅರ್ಥಪೂರ್ಣವಾಗಿ ಜಯಂತಿ ಆಚರಿಸಲಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಸಿ.ಎಸ್.ಪೂರ್ಣಿಮ, ಇಒ ಜಿ.ಕೆ.ಹರೀಶ್, ಮುಖ್ಯಾಧಿಕಾರಿ ಡಾ.ಜಯಣ್ಣ, ಎಪಿಎಂಸಿ ಮಾಜಿ ನಿರ್ದೇಶಕ ಕುಪ್ಪೆಪ್ರಕಾಶ್ ಮಾತನಾಡಿದರು. ತಾಲೂಕು ಆಡಳಿತದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಮಾಧವ್, ನೀಲಕಂಠೇಗೌಡ, ತಮ್ಮಯ್ಯ, ದೇವರಾಜು, ಭಾಸ್ಕರ್, ದಿನೇಶ್, ಮಂಜುರಾಜ್ ಸೇರಿದಂತೆ ಹತ್ತು ಮಂದಿಗೆ ಕನಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಟಿಎಪಿಸಿಎಂಎಸ್ ನಿರ್ದೇಶಕ ದೊಡ್ಡಕೊಪ್ಪಲುರವಿ, ಜಿ.ಪಂ. ಮಾಜಿ ಸದಸ್ಯರಾದ ಜಿ.ಆರ್.ರಾಮೇಗೌಡ, ಮಾರ್ಚಳ್ಳಿಶಿವರಾಮು, ಪುರಸಭೆ ಸದಸ್ಯ ಶಿವಕುಮಾರ್, ನಟರಾಜು, ಕುರುಬರ ಸಂಘದ ಉಪಾಧ್ಯಕ್ಷ ಸಾಕರಾಜು, ಪದಾಧಿಕಾರಿಗಳಾದ ಬಿ.ಎಂ.ಗಿರೀಶ್, ಕೆ.ಎಂ.ಶ್ರೀನಿವಾಸ್, ರಾಜಶೇಖರ್, ರಾಮಕೃಷ್ಣೇಗೌಡ, ಮುಖಂಡರಾದ ಸಂತೋಷ್.ವಿ.ದೇವರಟ್ಟಿ, ಎಂ.ಲೋಕೇಶ್, ತಿಮ್ಮಶೆಟ್ಟಿ, ನವೀದ್, ಎಂ.ಎಸ್.ಮಹದೇವ್, ಉದಯಶಂಕರ್, ಸೋಮಣ್ಣ, ಸೈಯದ್‌ಜಾಬೀರ್, ಕಲ್ಲಹಳ್ಳಿಶ್ರೀನಿವಾಸ್, ಎಂ.ಜೆ.ರಮೇಶ್, ಗರುಡಗಂಭಸ್ವಾಮಿ, ವ್ಯಾನ್‌ಸುರೇಶ್, ಲತಾರವೀಶ್, ಸರಿತಾಜವರಪ್ಪ, ಹೆಚ್.ಪಿ.ಗೋಪಾಲ್, ರಾಣಿ, ಕೆ.ವಿನಯ್, ನಂದೀಶ್, ಕೆ.ಪಿ.ಜಗದೀಶ್, ಮಾರ್ಕ್ಮಹದೇವ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular