ಕೆ.ಆರ್.ನಗರ :ಸಮಾಜದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಸಮಾನತೆಯ ತತ್ವವನ್ನು ಸಾರಿದ ದಾಸಶ್ರೇಷ್ಠ ಭಕ್ತ ಕನಕದಾಸರ ತತ್ವ ಬದುಕಿನಲ್ಲಿ ಅಳವಡಿಕೆ ಮೂಲಕ ಜೀವನದ ಮೌಲ್ಯ ಹೆಚ್ಚಿಸಿಕೊಳ್ಳುವಂತೆ ಕೆ.ಆರ್.ನಗರ ಯುವ ಕಾಂಗ್ರೇಸ್ ಅಧ್ಯಕ್ಷ ದೆಗ್ಗನಹಳ್ಳಿ ಆನಂದ್ ಹೇಳಿದರು
ಕೆ.ಆರ್.ನಗರ ತಾಲೂಕಿನ ದೆಗ್ಗನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಎಸ್.ಡಿ.ಎಂ.ಸಿಯ ವತಿಯಿಂದ ಕನಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದ ಹಲವಾರು ದೋಷ ಲೋಪಗಳನ್ನು ನಿವಾರಣೆ ಮಾಡಿ ಮಾನವೀಯತೆಗೆ ಮಹಾ ಬೆಳಕು ತೋರಿದವರಾಗಿದ್ದಲ್ಲದೇ ಕನಕದಾಸರು ಮತ್ತು ತ್ರಿಪದಿಗಳ ಸಾಹಿತ್ಯ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ನಾವೆಲ್ಲರೂ ಸಂಕಲ್ಪ ಮಾಡಿಕೊಂಡಾಗ ಮಾತ್ರ ಅವರಿಗೆ ನಾವು ಕೊಡುವ ನಿಜವಾದ ಗೌರವವಾಗಿರುತ್ತದೆ ಎಂದು ಹೇಳಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಕನಕದಾಸರ ಪೋಟೋ ಹಾಗೂ ಸ್ತಬ್ಧ ಚಿತ್ರಗಳ ಮೆರವಣಿಗೆ ಮಾಡಲಾಯಿತು. ವಿದ್ಯಾರ್ಥಿಗಳು ವಿವಿಧ ವೇಷಭೂಷಣ ಹಾಕಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಿವಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಣ್ಣ, ಅನಿತಾ ಮಂಜು, ಶೋಭಾ ರಾಮಕೃಷ್ಣ, ಯಜಮಾನ್ ವರದರಾಜು, ಯೋಗೇಶ್, ಷಣ್ಮುಖ, ಮುಖ್ಯೋಪಾಧ್ಯಾಯರಾದ ದೇವ್ ಕುಮಾರ್, ಶಿಕ್ಷಕರಾದ ಶಿವಣ್ಣ, ಶಾರದಮ್ಮ, ಅರ್ಪಿತಾ, ಕವಿತಾ ಮುಂತಾದವರು ಉಪಸ್ಥಿತರಿದ್ದರು.