ಮಂಡ್ಯ: ಜಿಲ್ಲೆಯ ವಿವಿಧೆಡೆ ಸರಗಳ್ಳತನ ನಡೆಸಿದ ಆರೋಪಿಯನ್ನು ಮದ್ದೂರಿನ ಬೆಸಗರಹಳ್ಳಿ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತ ಸರಗಳ್ಳನಿಂದ 475 ಗ್ರಾಂ. ಚಿನ್ನಾರಣ, ಒಂದು ಕಾರು, ಒಂದು ಬೈಕ್ ಜಪ್ತಿ ಮಾಡಲಾಗಿದೆ.
ಜಾವೇದ್ ಬಂಧಿತ ಸರಗಳ್ಳನಾಗಿದ್ದು, ಜಿಲ್ಲೆಯ ಹಲವೆಡೆ ಸರಗಳ್ಳತನ ನಡೆಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಸಿಪಿಐ ವೆಂಕಟೇಶ ಗೌಡರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.