Monday, April 21, 2025
Google search engine

Homeಸ್ಥಳೀಯಜಿಲ್ಲಾಧಿಕಾರಿಗಳಿಂದ ಫ್ರೂಟ್ಸ್ – ಪಹಣಿ ಜೋಡಣೆ ಕಾರ್ಯದ ಪ್ರಗತಿ ಪರಿಶೀಲನೆ

ಜಿಲ್ಲಾಧಿಕಾರಿಗಳಿಂದ ಫ್ರೂಟ್ಸ್ – ಪಹಣಿ ಜೋಡಣೆ ಕಾರ್ಯದ ಪ್ರಗತಿ ಪರಿಶೀಲನೆ

ಮೈಸೂರು: ಇಂದು ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಮೈಸೂರು ಮತ್ತು ಹುಣಸೂರು, ಉಪವಿಭಾಗದ ಉಪವಿಭಾಗಾಧಿಕಾರಿಗಳು, ಉಪ ಕೃಷಿ ನಿರ್ದೇಶಕರು, ಎಲ್ಲಾ ತಾಲ್ಲೂಕಿನ ತಹಶೀಲ್ದಾರ್, ಸಹಾಯಕ ಕೃಷಿ ನಿರ್ದೇಶಕರು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು, ಕೃಷಿ ಅಧಿಕಾರಿಗಳು ಮತ್ತು ಸಹಾಯಕ ತೋಟಗಾರಿಕೆ ಅಧಿಕಾರಿ ಇವರಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಕಡಿಮೆ ಪ್ರಗತಿ ಸಾಧಿಸಿರುವ ಅಧಿಕಾರಿ/ಸಿಬ್ಬಂದಿಗಳಿಗೆ ಕಾರಣ ಕೇಳುವ ನೋಟೀಸ್ ಅನ್ನು ಜಾರಿ ಮಾಡಲು ಸೂಚಿಸಿದರು.

ಈ ಕೂಡಲೇ ಎಲ್ಲಾ ಅಧಿಕಾರಿಗಳು ಕಾರ್ಯನ್ಮುಖರಾಗಿ ಜಿಲ್ಲೆಗೆ ನಿಗಡಿಪಡಿಸಿರುವ ಗುರಿಯನ್ನು ಮುಂದಿನ 7 ದಿನದೊಳಗೆ ಪ್ರಗತಿ ಸಾಧಿಸುವಂತೆ ತಿಳಿಸಿದರು.

FRUITS (Farmer Registration and Unified beneficiary InformaTion System) ತಂತ್ರಾಂಶದಲ್ಲಿ ರೈತರ ಪಹಣಿಯನ್ನು ಸೇರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಮೈಸೂರಿನ ಎಲ್ಲಾ ರೈತರು ನಿಮ್ಮ ಎಲ್ಲಾ ಪಹಣಿಗಳನ್ನು/ಸರ್ವೇ ನಂಬರ್ಗಳನ್ನು FID ಯಲ್ಲಿ ಸೇರಿಸುವುದು. ಪ್ರಸ್ತುತ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ FID ಯನ್ನು ಮಾಡಿಸಬಹುದಾಗಿರುತ್ತದೆ.

ಆದ್ದರಿಂದ ರೈತರು ತಮ್ಮ ಪಹಣೆ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್ ಪ್ರತಿ ಹಾಗೂ ಪೋನ್ ನಂಬರ್ ನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಗಳು ಅಥವಾ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ನೀಡಿದಲ್ಲಿ ನಿಮ್ಮ FID ಯನ್ನು ನೊಂದಣಿ ಮಾಡಿಕೊಡಲಾಗುವುದು ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular