ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಸಾಗ್ಯ ಸರಗೂರು ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ಶ್ರೀ ಪಟ್ಟಲದಮ್ಮ ದೇವಿಯ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮವು ಜರುಗಿತು.
ಪಟ್ಟಲದಮ್ಮ ದೀವಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಪ್ರಧಾನ ಅರ್ಚಕ ಚಂದ್ರಶೇಖರ ಸ್ವಾಮೀಜಿ ನೇತೃತ್ವದಲ್ಲಿ ಪೂಜಾಕೈಂಕಾರ್ಯ ಕೈಗೊಳ್ಳಲಾಯಿತು.ಬೆಳಿಗ್ಗೆ ಮಹಾ ಕುಂಭಾಭಿಷೇಕ,ಕಳಸ ಪ್ರತಿಷ್ಠಾಪನೆ ಹೋಮ ಹವನ ನಡೆಯಿತು.

ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದ ಸುತ್ತಮುತ್ತಲನ ಗ್ರಾಮಸ್ಥರು.ಬಳಿಕ ಬಂದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ರಾಮ ದೇವತೆ ಪಟ್ಟಲದಮ್ಮ ತಾಯಿ ಗ್ರಾಮದ ಸರ್ವ ಜನಾಂಗಕ್ಕೂ ಒಳ್ಳೆದ್ದನ್ನು ಮಾಡಲಿ,ಭಕ್ತರ ಇಷ್ಟಾರ್ಥ ನೆರವೇರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದ ಅರ್ಚಕರು.ಗ್ರಾಮ ದೇವತೆ ಪಟ್ಟಲದಮ್ಮ ತಾಯಿ ಪುರಾತನ ಕಾಲದ ದೇವಸ್ಥಾನವಾಗಿತ್ತು. ಅದನ್ನು ಶೀತಗೊಳಿಸಿ ನೂತನ ದೇವಸ್ಥಾನ ನಿರ್ಮಾಣ ಮಾಡಿದ್ದೇವೆ. ಸೂರ್ಯ, ಚಂದ್ರ,ಈಶ್ವರ ಇರುವಂತ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ್ದೇವೆ. ಈ ವಿಗ್ರಹ ರೈತ ಹೊಲ ಹೊಳುತ್ತಿದ್ದ ವೇಳೆ ಸಿಕ್ಕಿದ್ದು ಪ್ರತಿಷ್ಠಾಪನೆ ಮಾಡಿದ್ದೇವೆ ದೇವರು ಎಲ್ಲರಿಗೂ ಒಳ್ಳೆಯದನ್ನ ಮಾಡಲಿ ಎಂದು ಸರಗೂರು ಗ್ರಾಮದ ಗ್ರಾಮಸ್ಥ ಕೆಂಪೇಗೌಡ ಪ್ರಾರ್ಥಿಸಿದರು.
