Saturday, April 19, 2025
Google search engine

Homeರಾಜ್ಯಗುಂಡ್ಲುಪೇಟೆ ಪಟ್ಟಣದ ಊಟಿ ರಸ್ತೆ ಶಾಲೆಗೆ ನ್ಯಾಯಾಧೀಶರ ಭೇಟಿ: ಮುಖ್ಯ ಶಿಕ್ಷಕರಿಗೆ ತರಾಟೆ

ಗುಂಡ್ಲುಪೇಟೆ ಪಟ್ಟಣದ ಊಟಿ ರಸ್ತೆ ಶಾಲೆಗೆ ನ್ಯಾಯಾಧೀಶರ ಭೇಟಿ: ಮುಖ್ಯ ಶಿಕ್ಷಕರಿಗೆ ತರಾಟೆ

ಗುಂಡ್ಲುಪೇಟೆ: ಶಾಲೆಯಲ್ಲಿ  ಶುಚಿತ್ವ ಹಾಗೂ ಪರಿಸರವನ್ನು ಕಾಪಾಡುವಲ್ಲಿ ಊಟಿ ರಸ್ತೆ ಶಾಲೆಯ ಮುಖ್ಯಶಿಕ್ಷಕರು ವಿಫಲರಾದ ಹಿನ್ನೆಲೆ ನ್ಯಾಯಾಧೀಶರು ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಶನಿವಾರ ಬೆಳಿಗ್ಗೆ ಪಟ್ಟಣದ ಶತಮಾನೋತ್ಸವ ಶಾಲೆ ಊಟಿರಸ್ತೆ ಹಿರಿಯ ಪ್ರಾಥಮಿಕ ಶಾಲೆಗೆ ನ್ಯಾಯಾದೀಶರಾದ ಶಿವಕುಮಾರ್ ರವರು ಬೇಟಿ ನೀಡಿ ಶಾಲೆಯ ಮೂಲಭೂತ ಸೌಕರ್ಯಗಳನ್ನು ಪರಿಶೀಲನೆ ನಡೆಸಿದರು.

ಈ ವೇಳೆ ಶಾಲೆಯ ಮುಖ್ಯ ಶಿಕ್ಷಕರು ಶಾಲೆಯಲ್ಲಿ ಶುಚಿತ್ವ ಹಾಗೂ ಪರಿಸರವನ್ನು ಕಾಪಾಡುವಲ್ಲಿ ನಿರ್ಲಕ್ಷ್ಯ ತೋರಿರುವುದು ಕಂಡು ಬಂದ ಹಿನ್ನೆಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ತರಾಟೆಗೆ ತೆಗೆದುಕೊಂಡರು.

ಮುಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ವಾತಾವರಣ, ಶುಚಿತ್ಚ ಹಾಗೂ ಉತ್ತಮ ಪರಿಸರ ನಿರ್ಮಾಣ ಮಾಡಬೇಕೆಂದು ಸೂಚನೆಯನ್ನು ನೀಡಿದರು.

ಭೇಟಿ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್, ನ್ಯಾಯಾಲಯದ ಸಿಬ್ಬಂದಿ ಮಹದೇವಸ್ವಾಮಿ, ಸುಂದರ್ ಹಾಗೂ ಶಾಲೆಯ ಸಿಬ್ಬಂದಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular