ತುಮಕೂರು: ವಿದ್ಯಾರ್ಥಿನಿಯರ ನಡುವೆ ನಿಂತು ಮಸ್ತು ಮಸ್ತು ಹುಡುಗಿ ಬಂದ್ಲು ಎಂದು ಹಾಸ್ಟೆಲ್ ವಿದ್ಯಾರ್ಥಿನಿಯರ ಜೊತೆ ತುಮಕೂರು ಡಿಸಿ ಮತ್ತು ಅಧಿಕಾರಿಗಳ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.
ತುಮಕೂರು ಹೊರವಲಯದ ಗೆದ್ದಲಹಳ್ಳಿಯಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಜಿಲ್ಲೆಯ ಬರ ಮರೆತು ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ‘ದೀಪಾ’ವಳಿ ಆಚರಿಸಲಾಗಿದೆ.
ಕಾಲೇಜು ಯುವತಿಯರ ಜೊತೆ ಮಣಿ ಮಣಿ ಕನ್ಯಾಮಣಿ, ಮಸ್ತ್ ಮಸ್ತ್ ಹುಡುಗಿ ಬಂದ್ಲು, ಸುಂಟರಗಾಳಿ ಹಾಗೂ ಜಿಂಗಲಕ್ಕಿ ಬಾ ಹಾಡಿಗೆ ಅಧಿಕಾರಿಗಳು ಡ್ಯಾನ್ಸ್ ಮಾಡಿದ್ದಾರೆ.
ಡಿಸಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಡ್ಯಾನ್ಸ್ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಅಧಿಕಾರಿಗಳ ನಡೆಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತುಮಕೂರು ಡಿಸಿ ಕೆ.ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೆಶಕ ಕೃಷ್ಣಪ್ಪ, ತುಮಕೂರು ಎಸಿ ಹಾಗೂ ತಹಶೀಲ್ದಾರ್ ಸಿದ್ದೇಶ್ ನೃತ್ಯ ಮಾಡಿದ್ದಾರೆ.
ಈ ವೇಳೆ ಡಿ.ಸಿ ಶ್ರೀನಿವಾಸ್ ರನ್ನ ಅಧಿಕಾರಿಗಳು ಹೆಗಲ ಮೇಲೆ ಎತ್ತಿ ಕುಣಿಸಿದ್ದಾರೆ.