Sunday, April 20, 2025
Google search engine

Homeರಾಜ್ಯಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಗೆ ಸೆಸ್ ಹೆಚ್ಚಳಕ್ಕೆ ಜಿಐಎಸ್ ಪ್ರಾತ್ಯಕ್ಷಿಕೆ ಸಭೆ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಗೆ ಸೆಸ್ ಹೆಚ್ಚಳಕ್ಕೆ ಜಿಐಎಸ್ ಪ್ರಾತ್ಯಕ್ಷಿಕೆ ಸಭೆ

ಬೆಂಗಳೂರು : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಗೆ ಸೆಸ್ ಅನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಮಿಕ‌ ಸಚಿವ ಸಂತೋಷ್‌ ಲಾಡ್ ಪ್ರಾತ್ಯಕ್ಷಿಕೆ ಸಭೆ ನಡೆಸಿದರು.

ವಿಕಾಸಸೌಧದ ಸಭಾಂಗಣ‌ ಕೊಠಡಿಯಲ್ಲಿ ನಡೆದ ಸಭೆಯಲ್ಲಿ  ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಗೆ ಪ್ರಸಕ್ತ ಬರುತ್ತಿರುವ ಸೆಸ್ ಕಡಿಮೆಯಾಗಿದ್ದು,ಸೆಸ್ ಅಳವಡಿಕೆಗೆ ಇದೂವರೆಗೂ ಯಾವುದೇ ರೀತಿಯ ತಂತ್ರಜ್ಞಾನವನ್ನು ಬಳಸಲಾಗಿಲ್ಲ.ಹೀಗಾಗಿ ಸೆಸ್ ಅಳವಡಿಕೆಗೆ  GIS (Geographical Information System) ತಂತ್ರಜ್ಞಾನವನ್ನು ಬಳಸಿ ಸೆಸ್ ಅನ್ನು ಹೆಚ್ಚಿಸಬಹುದೆಂಬ ನಿಟ್ಟಿನಲ್ಲಿ ಕೆಲವು ತಜ್ಞರು ಸಚಿವರಿಗೆ ಈ ಹಿಂದೆ ಸಲಹೆ ನೀಡಿದ್ದರು.ಅದರನ್ವಯ ಇಂದು ಆರು ವೆಂಡರ್ಸ್ ಸೆಸ್ ಅನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಐಎಸ್ ಅಳವಡಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ತಮ್ಮತಮ್ಮ ಅಭಿಪ್ರಾಯ ವಿವರಿಸಿದರು. ಜಿಐಎಸ್ ಬಳಕೆಯಿಂದ ಯಾವ ರೀತಿ ಈ ಮಂಡಳಿಗೆ ಲಾಭದಾಯಕವಾಗಲಿದೆ? ಜಿಐಎಸ್ ಅಳವಡಿಸುವುದು ಹೇಗೆ?ಜಿಐಎಸ್‌ ನಿಂದ ಸೆಸ್ ಹೆಚ್ಚಳ ಹೇಗೆ ಸಾಧ್ಯ? ಇದು ಕಾರ್ಮಿಕ ಮಂಡಳಿ ಜೊತೆ ಹೇಗೆ ಕೆಲಸ ಮಾಡುತ್ತದೆ? ಸೇರಿದಂತೆ ಇತ್ಯಾದಿಗಳ ಕುರಿತು ಸಚಿವ ಲಾಡ್,  ಸಭೆಯಲ್ಲಿ ಚರ್ಚಿಸಿ ಮಾಹಿತಿ ಪಡೆದರು. ಸಂಬಂಧಪಟ್ಟ ವೆಂಡರ್ಸ್‌ಗಳಿಂದ ಅವರವರ ಅಭಿಪ್ರಾಯ ಮಾಹಿತಿ ವಿವರ ಸಂಗ್ರಹಿಸಿದ ಸಚಿವರು,ಈ ಬಗ್ಗೆ ಕೂಲಂಕುಷವಾಗಿ ಮತ್ತೊಮ್ಮೆ ಪರಿಶೀಲಿಸಿ ಮತ್ತೊಂದು ಮಹತ್ವದ ಸಭೆ ನಡೆಸಿ, ಜಿಐಎಸ್ ಅಳವಡಿಕೆ ಸಾಧಕಬಾಧಕಗಳನ್ನು ಸೆಸ್ ಬಗ್ಗೆ  ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ 1996ರ ಅನುಸಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಫಲನುಭವಿಗಳಾಗಿ ನೊಂದಣಿ ಮಾಡುವುದು.

ಮಂಡಳಿ ಜಾರಿಗೆ ತಂದಿರುವ ಯೋಜನೆಗಳಡಿ ದೊರಕುವ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳ ಸಮರ್ಪಕ ವಿತರಣೆ ಮಾಡುವುದು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯ್ದೆ 1996 ಹಾಗೂ ಸುಂಕ ನಿಯಮಗಳು, 1998ರ ಅಡಿಯಲ್ಲಿ ಮಂಡಳಿಗೆ ಸುಂಕದ ರೂಪದಲ್ಲಿ ಆರ್ಥಿಕ ಸಂಪನ್ಮೂಲವನ್ನು ಸಂಗ್ರಹಿಸುವುದು ಮಂಡಳಿಯ ಮುಖ್ಯ ಧ್ಯೇಯೋದ್ದೇಶವಾಗಿತ್ತದೆ.

ಪ್ರಾತ್ಯಕ್ಷಿಕ ಸಭೆಯಲ್ಲಿ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಮೊಹಮ್ಮದ್ ಮೊಸಿನ್, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾರ್ಮಿಕ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಭಾರತಿ, ಜಂಟಿ ಕಾರ್ಯದರ್ಶಿ  ವೆಂಕಟರಾಜು ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular