Tuesday, April 22, 2025
Google search engine

Homeಅಪರಾಧಬೈಕ್ – ಟೆಂಪೋ ನಡುವೆ ಭೀಕರ ರಸ್ತೆ: ಮೂವರು ಯುವಕರ ಸಾವು

ಬೈಕ್ – ಟೆಂಪೋ ನಡುವೆ ಭೀಕರ ರಸ್ತೆ: ಮೂವರು ಯುವಕರ ಸಾವು

ಚಿಕ್ಕೋಡಿ: ಬೈಕ್ ಮತ್ತು ಟೆಂಪೋ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಚಿಕ್ಕೋಡಿ ತಾಲೂಕಿನ ಬಸವನಾಳಗಡ್ಡೆ ಬಳಿ ಮಂಗಳವಾರ ರಾತ್ರಿ ನಡೆದಿದೆ.

ಮೃತ ಯುವಕರನ್ನು ಕೇರೂರ ಗ್ರಾಮದ ಪ್ರಶಾಂತ ಬೈರು ಖೋತ (22), ಸತೀಶ ಕಲ್ಲಪ್ಪ ಹಿರೇಕೊಡಿ(23), ಯಲಗೌಡ ಚಂದ್ರಕಾಂತ ಪಾಟೀಲ (22) ಎಂದು ಗುರುತಿಸಲಾಗಿದೆ.

ಯುವಕರು ಬೈಕ್ ನಲ್ಲಿ ಚಿಕ್ಕೋಡಿ ಕಡೆಯಿಂದ ಕೇರೂರ ಗ್ರಾಮಕ್ಕೆ ತೆರಳುವ ಸಮಯದಲ್ಲಿ ಚಿಕ್ಕೋಡಿ- ಅಂಕಲಿ ರಸ್ತೆಯ ಬಸವನಾಳಗಡ್ಡೆ ಬಳಿ ಟೆಂಪೋ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಇಬ್ಬರು ಸ್ಥಳದಲ್ಲಿ ಮೃತಪಟ್ಟರೆ ಓರ್ವ ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

RELATED ARTICLES
- Advertisment -
Google search engine

Most Popular