ಬೆಳಗಾವಿ: ಸುವರ್ಣ ವಿಧಾನ ಸೌಧದಲ್ಲಿ ಇಂದಿನಿಂದ ಎರಡು ವಾರಗಳ ನಡೆಯಲಿರುವ ಚಳಿಗಾಲದ ಅಧಿವೇಶನ ಇಂದು ಆರಂಭಗೊಂಡಿದೆ. ಅಧಿವೇಶನದಲ್ಲಿ ಬರ, ವರ್ಗಾವಣೆ ದಂಧೆ ಆರೋಪ ಹಾಗೂ ಅನುದಾನದ ಕೊರತೆ ಸದ್ದು ಮಾಡಲಿವೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು, ಸರ್ಕಾರದ ವಿರುದ್ಧ ಎರಡೂ ಪಕ್ಷಗಳು ಜಂಟಿಯಾಗಿ ಮುಗಿಬೀಳಲು ಮುಂದಾಗಿವೆ. ನಿಗದಿತ ಸಮಯಕ್ಕೆ ಕಲಾಪ ಆರಂಭಿಸುವ ಅಧಿಕಾರ ಇದೆ. ಯಾರು ಬರಲಿ ಬರದಿರಲಿ, ನೀವು ಸರಿಯಾದ ಸಮಯಕ್ಕೆ ಕಲಾಪ ಆರಂಭಿಸಿ ಎಂದು ಸ್ಪೀಕರ್ ರಲ್ಲಿ ರಾಯರೆಡ್ಡಿ ಮನವಿ ಮಾಡಿದರು.