ಮೈಸೂರು: ಇಂದು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಟೀಂ ಮೈಸೂರು ತಂಡದ ವತಿಯಿಂದ 8 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ ದುರ್ಘಟನೆಯಿಂದ ಅಕಾಲಿಕ ಮರಣಕ್ಕೆ ತುತ್ತಾದ ಕಾರಣ ದೀಪಗಳನ್ನು ಹಚ್ಚಿ, ಅರ್ಜುನನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ ಅರ್ಜುನನ ಆತ್ಮಕ್ಕೆ ಶಾಂತಿ ಕೋರಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗೋಕುಲ್ ಗೋವರ್ಧನ್ ರವರು ಕಾಡಿನಲ್ಲಿ ಕಾಡಾನೆಯ ಸೆರೆ ಹಿಡಿಯುವ ಸಂದರ್ಭದಲ್ಲಿ ಕೆಲವು ಸಿಬ್ಬಂದಿಗಳ ಅಜಾಗ್ರತೆಯಿಂದ ಅರ್ಜುನನು ಸಾವಿಗಿಡಾಗಿದಾನೆ ಎಂಬ ಮಾಹಿತಿ ಬರುತ್ತಿದ್ದು , ಇದನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ತನಿಖೆ ಪಡಿಸಬೇಕು, ನಿಜಕ್ಕೂ ಈ ರೀತಿ ಅಜಾಗ್ರತೆಯಿಂದ ಅರ್ಜುನನ ಸಾವಾಗಿದ್ದರೆ ಅಂತವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು,ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಇಂದು ನಾಲ್ಕು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗು ವೈದ್ಯರು ಕಾರ್ಯಾಚರಣೆ ಆರಂಭಿಸಿದ್ದರು, ಪುಂಡಾನೆಯನ್ನು ಸೆರೆಹಿಡಿಯಲು ಅರಿವಳಿಕೆ ಚುಚ್ಚುಮದ್ದು ನೀಡುವ ವೇಳೆ ಅರ್ಜುನನ ಮೇಲೆ ಒಂಟಿಸಲಗ ದಿಢೀರ್ ದಾಳಿ ಮಾಡಿದೆ ಎಂಬ ಮಾಹಿತಿ ಬಂದಿದೆ, ಆದರೆ ಅರ್ಜುನ ಆ ಸಂದರ್ಭದಲ್ಲಿ ಕಾಡಾನೆಯ ದಾಳಿಯನ್ನು ಎದುರಿಸಲು ಸಶಕ್ತನಿದ್ದನೆ ಎಂಬುದು ಸಾಬೀತಾಗಬೇಕಾಗಿದೆ,
ಒಂಟಿಸಲಗ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ.
ಈ ವೇಳೆ ಒಂಟಿಸಲಗದ ಜೊತೆ ಅರ್ಜುನ ಕಾಳಗಕ್ಕೆ ಇಳಿದಿದೆ,ಎರಡು ಆನೆಗಳು ಕಾಳಗಕ್ಕೆ ಬೀಳುತ್ತಿದ್ದಂತೆ ನಿಯಂತ್ರಿಸಲಾಗದೆ ಮಾವುತ ಇಳಿದು ಓಡಿದ್ದಾನೆ. ಕಾಳಗದಲ್ಲಿ ಅರ್ಜುನ ದಾರುಣವಾಗಿ ಸಾವನ್ನಪ್ಪಿದೆ. ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅರ್ಜುನ, ಸೌಮ್ಯ ಸ್ವಾಭಾವದಿದಲೇ ಎಲ್ಲರ ಪ್ರೀತಿ ಗಳಿಸಿದ್ದ. ಅರ್ಜುನನ ಸಾವು ನಿಜಕ್ಕೂ ಮೈಸೂರಿನ ಜನತೆಗೆ ಮತ್ತು ನಾಡಹಬ್ಬ ದಸರಾಗೆ ಒಂದು ದೊಡ್ಡ ನಷ್ಟ ಉಂಟಾಗಿದೆ
ಈ ಸಂದರ್ಭದಲ್ಲಿ ಯಶ್ವಂತ್, ಕಿರಣ್ ಜೈ ರಾಮ್ ಗೌಡ, ಹಿರಿಯಣ್ಣ, ದಾಮೋದರ್, ಮುರಳಿ, ಮಂಜು ಹುಣಸೂರು, ಪ್ರಸನ್ನ ರಾಜ್ ಗುರು, ಸುಮಂತ್, ಹೇಮಂತ್, ಸುನಿಲ್, ಮನೋಜ್, ಅಭಿಷೇಕ್, ಮಂಜು, ಚಿನ್ನಸ್ವಾಮಿ, ಶ್ರೀಮತಿ ಕಾವೇರಿ, ಹಾಗೂ ಸಾಕಷ್ಟು ಅರ್ಜುನನ ಅಭಿಮಾನಿಗಳು ಉಪಸ್ಥಿತರಿದ್ದರು.
