ಹನೂರು: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಿಜೆಪಿ ರಾಜ್ಯ ಓಬಿಸಿ ಮೋರ್ಚಾ ವತಿಯಿಂದ ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಓಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಜನ ಧ್ವನಿ ಬಿ ವೆಂಕಟೇಶ್ ರವರು ಕಳೆದ ನಾಲ್ಕು ವರ್ಷಗಳಿಂದ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಉಚಿತ ಆರೋಗ್ಯ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿರುವುದರಿಂದ ಹನೂರು ಕ್ಷೇತ್ರದ ಜನತೆಗೆ ಅನುಕೂಲವಾಗಿದೆ. ಆಪರೇಷನ್ ಮಾಡಲು ಸಾಧ್ಯವಿಲ್ಲದೆ ಪರಿತಪಿಸುತ್ತಿದ್ದ ಹಿರಿ ಜೀವಗಳು ಕಣ್ಣಿನ ಆಪರೇಷನ್ ಮಾಡಿಸಿಕೊಂಡು ಇನ್ನಷ್ಟು ಕಾಲ ಬಾಳಿ ಬದುಕಲು ನೆರವಾಗಿದ್ದಾರೆ.
ಇದೇ ವೇಳೆ ಲೋಕೇಶ್ ಜತ್ತಿ ಮಾತನಾಡಿ, ಹನೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನ ಧ್ವನಿ ಬಿ ವೆಂಕಟೇಶ್ ಅವರ ನೇತೃತ್ವದಲ್ಲಿ 55ನೇ ಕ್ಯಾಂಪನ್ನು ಯಶಸ್ವಿಯಾಗಿ ಮುಗಿಸಿದ್ದೇವೆ, ಕಳೆದ ನಾಲ್ಕು ವರ್ಷಗಳಿಂದಲೂ ಸಹ ವೆಂಕಟೇಶ್ ರವರು ಹನೂರು ಕ್ಷೇತ್ರದ ಜನತೆಗೆ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದಾರೆ. ಪ್ರತಿಯೊಬ್ಬ ಮನುಷ್ಯನಿಗೂ ಕಣ್ಣು ಪ್ರಮುಖ ಅಂಗ ಇದೇ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಣ್ಣಿನ ಬಗ್ಗೆ ಸುರಕ್ಷತೆ ವಹಿಸಬೇಕು ಎಂದರು.
ಇದೇ ವೇಳೆ ವೆಂಕಟೇಶ್ ಕಚೇರಿ ಸಿಬ್ಬಂದಿಗಳಾದ ರಾಮಚರಣ್, ಅರವಿಂದ್, ಪ್ರವೀಣ್ ಕುಮಾರ್, ರಾಮಚಂದ್ರ ಹಾಜರಿದ್ದರು.