ಕೆ.ಆರ್.ನಗರ : ಇನ್ನು ಮುಂದೆ ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳನ್ನು ಕಾಡು ಪ್ರಾಣಿಗಳ ದಾಳಿಯ ನಿಯಂತ್ರಣಕ್ಕೆ ಬಳಸಬಾರದು ಎಂದು ಮೈಸೂರು ಜಿಲ್ಲಾ ರೈತಮುಖಂಡ ಚಿಕ್ಕಕೊಪ್ಪಲು.ಡಿ. ಪುನೀತ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಲೂರು ಬಳಿ ನಡೆದ ಘಟನೆಯಲ್ಲಿ 8 ಅಂಬಾರಿ ಹೊತ್ತ ಅರ್ಜುನನ್ನು ಕಳೆದುಕೊಳ್ಳುವಂತೆ ಆಯಿತು. ಇದಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳ ಬೇಜಬ್ದಾರಿತನವೇ ಕಾರಣವಾಗಿ ಎಂದು ದೂರಿದ್ದಾರೆ.
64 ವರ್ಷ ಮೇಲ್ಪಟ್ಟಿದ್ದ ಅರ್ಜುನ ಆನೆಯನ್ನು ಅಂಬಾರಿ ಹೊರುವುದನ್ನು ನಿಲ್ಲಿಸಿದ್ದರು. ಅರಣ್ಯ ಇಲಾಖೆಯ ಅಧಿಕಾರಿಗಳು ನಿಯಮಗಳನ್ನು ಮೀರಿ ಪುಂಡಾನೆಯ ಸೆರೆಯ ಕಾರ್ಯಾಚರಣೆಗೆ ಬಳಸಿಕೊಂಡು ಈ ಅನೆಯ ದುರಂತ ಸಾವಿಗೆ ಕಾರಣವಾಗಿದ್ದು, ಈ ಸಾವಿನ ಹೊಣೆಯನ್ನು ಅರಣ್ಯ ಇಲಾಖೆಯವರೇ ಹೊರಬೇಕೆಂದು ಮತ್ತು ಇದರಲ್ಲಿ ಲೋಪ ಎಸಗಿದವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಅರಣ್ಯ ಇಲಾಖೆಗಾಗಿಯೇ ಕೋಟ್ಯಾಂತರ ರೂಪಾಯಿಗಳನ್ನು ಪ್ರತಿವರ್ಷ ಮೀಸಲು ಇಡುತ್ತಿದ್ದು, ಈ ಹಣದಿಂದ ಜನರಿಗೆ ಉಪಟಳ ನೀಡುವ ಆನೆ ಸೇರಿದಂತೆ ಇನ್ನಿತರ ಪ್ರಾಣಿಗಳ ನಿಯಂತ್ರಣ ಮಾಡಲು ಪ್ರಾಣಿಗಳಿಗೆ ತರಬೇತಿ ನೀಡಲು ಕೇಂದ್ರವನ್ನು ತೆರೆಯಬೇಕು ಎಂದು ಮನವಿ ಮಾಡಿದ್ದಾರೆ
ಸೂಕ್ತ ತರಬೇತಿ ಪಡೆದ ಪ್ರಾಣಿಗಳನ್ನು ದಾಳಿ ನಿಯಂತ್ರಣಕ್ಕೆ ಬಳಸಿದರೇ ಇಂತಹ ಘಟನೆ ನಡೆಯುತ್ತಿರಲಿಲ್ಲ. ಇನ್ನು ಮುಂದಾದರು ಸರಕಾರ ಅರ್ಜುನ ಆನೆಯ ಅಂತಹ ಸಾವು ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಪುನೀತ್ ಆಗ್ರಹಿಸಿದ್ದಾರೆ.