Thursday, April 24, 2025
Google search engine

Homeರಾಜ್ಯವಿಕಲಚೇತನ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಸರ್ಕಾರ ನೀಡಿದೆ: ಬಿಇಓ ಆರ್. ಕೃಷ್ಣಪ್ಪ 

ವಿಕಲಚೇತನ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಸರ್ಕಾರ ನೀಡಿದೆ: ಬಿಇಓ ಆರ್. ಕೃಷ್ಣಪ್ಪ 

ಕೆ ಆರ್ ನಗರ:  ಅನುಕಂಪ ತೋರಿಸುವ ಬದಲು ಅವಕಾಶ ನೀಡುವ ಉದ್ದೇಶದಿಂದ ಸರ್ಕಾರ ವಿಕಲಚೇತನ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ ಎಂದು ವಿಕಲಚೇತನ ಮಕ್ಕಳು ಮತ್ತು ಪೋಷಕರಿಗೆ ಬಿಇಓ ಆರ್. ಕೃಷ್ಣಪ್ಪ  ತಿಳಿಸಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ವಿಶ್ವ ವಿಕಲಚೇತನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ಒಂದರಿಂದ ಹತ್ತನೇ ತರಗತಿಯವರಿಗೆ ವಿದ್ಯೆಗೆ ಬೇಕಾದ ಎಲ್ಲಾ ರೀತಿಯ ಸಹಕಾರ ಸವಲತ್ತುಗಳನ್ನು ನೀಡುವ ಜೊತೆಗೆ ವಿದ್ಯೆಯಲ್ಲಿ ವಂಚಿತರಾಗಬಾರದೆಂಬ ಉದ್ದೇಶದಿಂದ ಪರೀಕ್ಷೆಯಿಂದ ಹಿಡಿದು ಉತ್ತೀರ್ಣರಾಗುವವರೆಗೂ ಹಿಂದುಳಿದ ವಿದ್ಯಾರ್ಥಿಗಳನ್ನು ಸಹ ಮುಂದುವರಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಿಕಲಚೇತನ ಮಕ್ಕಳ ಭವಿಷ್ಯವನ್ನು ಪೋಷಕರು ಮತ್ತು ಶಿಕ್ಷಕರು ಹೆಚ್ಚು ಮುತುವರ್ಜಿ ವಹಿಸಿ ಪೋಸಿಸಿ ಬೆಳೆಸುವ ಮೂಲಕ ಅವರಿಗೆ ಅಗತ್ಯ ಸಲಹೆಗಳನ್ನು ನೀಡುವ ಜೊತೆಗೆ ವಿದ್ಯಾರ್ಥಿಯ ಮನ ಒಳಗಿನ ವಿಷಯವನ್ನು ತಿಳಿದು ಶಿಕ್ಷಣವನ್ನು ನೀಡಬೇಕಾದಂತಹ ಅಗತ್ಯ ಇದೆ ಎಂದು ತಿಳಿಸಿದರು.

ತಾಲೂಕು ಆರೋಗ್ಯ ಆಡಳಿತಾಧಿಕಾರಿ ನಟರಾಜ್ ಮಾತನಾಡಿ, ಪೋಷಕರು ಶಿಕ್ಷಕರ ಜೊತೆಗೆ ಸಾರ್ವಜನಿಕರು ಸಹ ವಿಕಲಚೇತನ ಮಕ್ಕಳನ್ನು ಕೀಳುಮಟ್ಟದಂದ ನೋಡದೆ ತಮ್ಮ ಮಕ್ಕಳನ್ನು ನೋಡುವ ರೀತಿಯಲ್ಲಿ ನೋಡಿ ಪ್ರೋತ್ಹಿಸಿದಾಗ ಮಾತ್ರ ವಿಕಲಚೇತನ ಮಕ್ಕಳು ಸಹ ತಮ್ಮಲ್ಲಿರುವ ದೌರ್ಬಲ್ಯವನ್ನು ಮರೆತು ಎಲ್ಲರಂತೆ ತಾವು ಸಹ ಆರೋಗ್ಯದಿಂದಿರುವಂತೆ ಭಾವಿಸುತ್ತಾರೆ ಎಂದು ಪೋಷಕರು ಮತ್ತು ಸಾರ್ವಜನಿಕರಿಗೆ ಸಲಹೆ ನೀಡಿದರು.                                                         

ಆರೋಗ್ಯ ಇಲಾಖೆಯಿಂದ ಪ್ರತಿ ಶಾಲೆಯ ವಿಕಲಚೇತನ ಮಕ್ಕಳಿಗಾಗಿ ಪ್ರತಿ ತಿಂಗಳು ಎರಡು ಬಾರಿ ತಾಲೂಕ್ ಮಟ್ಟದ ವೈದ್ಯರು ಮತ್ತು ಸಿಬ್ಬಂದಿಗಳು ಪರೀಕ್ಷಿಸಿ ಚಿಕಿತ್ಸೆ ನೀಡುತ್ತಾರೆ ಹಾಗೂ ಅಗತ್ಯವಿದ್ದಲ್ಲಿ ಶಾಲೆಯ ಶಿಕ್ಷಕರು ತಾಲೂಕ್ ಆಸ್ಪತ್ರೆಗೆ ಬಂದು ಮಕ್ಕಳನ್ನು ತೋರಿಸುವ ಮೂಲಕ ಚಿಕಿತ್ಸೆ ಕೊಡಗು ಕೊಡಿಸಬಹುದಾಗಿದೆ ಹಾಗೂ ಅಗತ್ಯ ಬಿದ್ದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಪ್ರತಿ ತಿಂಗಳು ಎರಡು ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುವುದು ವಿಕಲಚೇತನ ಮಕ್ಕಳನ್ನು ಮನೆ ಬಾಗಿಲಿಗೆ ಬಂದು ನೋಡುವ ಮೂಲಕ ಚಿಕಿತ್ಸೆಯನ್ನು ಕೊಡಿಸುತ್ತಿರುವುದು ವಿಕಲಚೇತನರ ಪೋಷಕರಿಗೆ ಅನುಕೂಲವಾದಂತೆ ಸರಿ ಎಂದು ತಿಳಿಸಿದರು.                                                        

ಕಾರ್ಯಕ್ರಮವನ್ನು ಉದ್ದೇಶಿಸಿ ಸಿಡಿಪಿಒ ಅಣ್ಣಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ವೆಂಕಟೇಶ್,  ಸ್ವಾಮಿ, ವಿವೇಕಾನಂದ ಯೂತ್ ಮೊಮೆಂಟ್ ನ ಡಾ. ರಮೇಶ್, ಒಕ್ಕಲಿಗ ನೌಕರರ ಸ್ನೇಹ ಬಳಗದ ಅಧ್ಯಕ್ಷ ಶಂಕರೇಗೌಡ, ವಿಕಲಚೇತನ ಸಮನ್ವಯ ಅಧಿಕಾರಿ ಕೆ ಎಲ್ ಹೇಮಂತ್ ಮಾತನಾಡಿದರು.     

ವೇದಿಕೆಯಲ್ಲಿ ಬಿಐಇ  ಆರ್ ಟಿ ಪ್ರೇಮ ನಾಗರಾಜ್, ರಾಜ್ಯ ಸರ್ಕಾರಿ ನೌಕರರ ರಾಜ್ಯ ಪರಿಸರ ಸದಸ್ಯ ರಮೇಶ್, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಕುಮಾರೇಗೌಡ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಧುಕುಮಾರ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದ್, ಸಿಆರ್‌ಪಿಗಳಾದ ಈಶ್ವರ್, ಸುಬ್ಬು ರಾಮನ್, ಶಿಕ್ಷಕರ  ಸಂಘದ ಕಾರ್ಯದರ್ಶಿ ಪ್ರಸನ್ನ, ಗೌರವ ಅಧ್ಯಕ್ಷ ರಾಜಶೇಖರ್ ಸೇರಿದಂತೆ ವಿಕಲಚೇತನ ಮಕ್ಕಳು ಪೋಷಕರು ಶಿಕ್ಷಕರು ಹಾಜರಿದ್ದರು.

RELATED ARTICLES
- Advertisment -
Google search engine

Most Popular