Wednesday, April 23, 2025
Google search engine

HomeUncategorizedರಾಷ್ಟ್ರೀಯನಿಲ್ಲಿಸಿದ್ದ ಟ್ರಕ್​ ಗೆ ಬಿಹಾರ ಸಚಿವರ ಬೆಂಗಾವಲು ವಾಹನ ಡಿಕ್ಕಿ: ಓರ್ವ ಪೊಲೀಸ್ ಅಧಿಕಾರಿ ಸಾವು,...

ನಿಲ್ಲಿಸಿದ್ದ ಟ್ರಕ್​ ಗೆ ಬಿಹಾರ ಸಚಿವರ ಬೆಂಗಾವಲು ವಾಹನ ಡಿಕ್ಕಿ: ಓರ್ವ ಪೊಲೀಸ್ ಅಧಿಕಾರಿ ಸಾವು, ನಾಲ್ವರಿಗೆ ಗಂಭೀರ ಗಾಯ

ಬಿಹಾರ: ನಿಲ್ಲಿಸಿದ್ದ ಟ್ರಕ್​ ಗೆ ಬಿಹಾರ ಸಚಿವರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪೊಲೀಸ್ ಅಧಿಕಾರಿ​ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಿಹಾರ ಸರ್ಕಾರದ ಸಚಿವ ಜಮಾ ಖಾನ್ ಅವರ ಬೆಂಗಾವಲು ಪೊಲೀಸ್ ವಾಹನವು ಮಂಗಳವಾರ ರಾಜ್ಯದ ರೋಹ್ತಾಸ್ ಜಿಲ್ಲೆಯಲ್ಲಿ ನಿಂತಿದ್ದ ಟ್ರಕ್‌ ಗೆ ಡಿಕ್ಕಿ ಹೊಡೆದಿತ್ತು.

ಗಾಯಗೊಂಡವರಲ್ಲಿ ರಾಣಿ ಕುಮಾರಿ, ಅರ್ಚನಾ ಕುಮಾರಿ ಮತ್ತು ಮನೋಜ್ ಕುಮಾರ್ ಮತ್ತು ರಮೇಶ್ ಕುಮಾರ್ ಎಂದು ಗುರುತಿಸಲಾದ ಇಬ್ಬರು ಮಹಿಳಾ ಪೊಲೀಸರು ಸೇರಿದ್ದಾರೆ.

ಪ್ರಾಥಮಿಕ ಚಿಕಿತ್ಸೆಗಾಗಿ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು ಮತ್ತು ಪ್ರಾಥಮಿಕ ಆರೈಕೆಯ ನಂತರ ವಾರಾಣಸಿಗೆ ಕಳುಹಿಸಲಾಯಿತು.

ಅಪಘಾತದಲ್ಲಿ ಸಾವನ್ನಪ್ಪಿದ ಪೊಲೀಸ್​ ಅಧಿಕಾರಿಯ ಗುರುತಿಸಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ಮೃತದೇಹ ಪೊಲೀಸ್ ಕಸ್ಟಡಿಯಲ್ಲಿದ್ದು, ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ನಡೆಯುತ್ತಿದೆ.

ಅಪಘಾತದ ಬಗ್ಗೆ ಮಾಹಿತಿ ನೀಡಿದ ನಂತರ ಜಿಲ್ಲಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular