ಮಂಡ್ಯ: ಸರ್ಕಾರದಿಂದ ಬಂದ ಹಣವನ್ನು ಸಾಲಕ್ಕೆ ವಜಾ ಮಾಡಿಕೊಳ್ಳುತ್ತಿರುವ ಹಿನ್ನಲೆ ಮಂಡ್ಯದ ಬ್ಯಾಂಕ್ ಆಫ್ ಬರೋಡಾ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಜಿಲ್ಲೆಯಾದ್ಯಂತ ಬರಗಾಲದ ಪರಿಸ್ಥಿತಿಯಲ್ಲಿದೆ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರದಿಂದ ಬಂದ ಹಣ ಸಾಲಕ್ಕೆ ವಜಾ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ರೈತರ ಸಾಲಕ್ಕೆ ಬ್ಯಾಂಕ್ ನವರು ಕಿರುಕುಳ ನೀಡ್ತಿದ್ದಾರೆ. ಈ ಕೂಡಲೇ ಬ್ಯಾಂಕ್ ನವರು ಇದನ್ನು ಬಿಡಬೇಕು, ರೈತರಿಗೆ ಕಿರುಕುಳ ನೀಡಬಾರದು. ಈ ಕೂಡಲೇ ಇವುಗಳನ್ನು ನಿಲ್ಲಿಸದಿದ್ದರೆ, ಬ್ಯಾಂಕ್ ಗೆ ಬೀಗ ಜಡಿಯುವುದಾಗಿ ಎಚ್ಚರಿಕೆ ನೀಡಿದರು.