ಮಂಗಳೂರು(ದಕ್ಷಿಣ ಕನ್ನಡ): ಅಡ್ಯಾರಿನ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಡಿ.7ರಿಂದ 9ವರೆಗೆ ಮೂರು ದಿನಗಳ ‘ಸಿನರ್ಜಿಯಾ 2023’ ತಾಂತ್ರಿಕ ಆವಿಷ್ಕಾರ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಸ್. ಇಂಜಗನೇರಿ ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ವೇರ್ ಇನ್ನೋವೇಶನ್ ಚೇಂಜಸ್ ದ ಫ್ಯೂಚರ್’ ಎಂಬ ಟ್ಯಾಗ್ ಲೈನ್ ನೊಂದಿಗೆ ನಡೆಯುವ ಸಿನರ್ಜಿಯಾ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲು, ಸಹವರ್ತಿಗಳೊಂದಿಗೆ ಮತ್ತು ಕೈಗಾರಿಕಾ ಮುಖಂಡರೊಂದಿಗೆ ಸಂಪರ್ಕ ಹೊಂದಲು, ಸಾಮಾಜಿಕ ಮತ್ತು ಕೈಗಾರಿಕಾ ಸವಾಲುಗಳನ್ನು ಪರಿಹರಿಸುವ ಮೂಲಕ ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಲು ವೇದಿಕೆಯಾಗಿದೆ ಎಂದರು.