ಮಂಡ್ಯ: ರಾಜ್ಯ ರೈತ ಸಂಘ ಪುಟ್ಟಣ್ಣಯ್ಯ ಬಣ ಹಾಗೂ ರಾಜ್ಯ ರೈತ ಸಂಘ ರೈತ ಬಣದ ನಡುವೆ ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗಲಾಟೆಯಾಗಿದೆ.
ರಾಜ್ಯ ರೈತಸಂಘ ರೈತ ಬಣದ ರಾಜ್ಯಾಧ್ಯಕ್ಷ ಇಂಗಲಕುಪ್ಪೆ ಕೃಷ್ಣ ಎಂಬುವವರು ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮೇಲೆ ಹಲ್ಲೆ ಮಾಡಿ ಕಾರು ಹತ್ತಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಬಡಗಲಪುರ ನಾಗೇಂದ್ರ ಬಣದಿಂದ ಪ್ರತಿಭಟನೆ ನಡೆಸಲಾಗಿದೆ.

ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುತ್ತಿದ್ದು, ಆಕ್ರಮವಾಗಿ ಕಾರಿಗೆ ನಾಮಫಕಲ ಹಾಕಿಕೊಂಡಿದ್ದಾನೆ. ಕಾರಿನ ಮೇಲೆ ಹಸಿರು ದೀಪ ಹಾಕಿಕೊಂಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು ಕಾರ್ ಸೀಜ್ ಮಾಡುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಪೊಲೀಸರೊಂದಿಗೂ ಪ್ರತಿಭಟನಾಕಾರರ ಮಾತಿನ ಚಕಮಕಿ ನಡೆದಿದ್ದು, ಕೊನೆಗೂ ಆರ್ ಟಿಒ ಅಧಿಕಾರಿಗಳು ಕಾರ್ ಸೀಜ್ ಮಾಡಿದ್ದಾರೆ.

ಕಾರು ಅಡ್ಡಗಟ್ಟಿ ಹಲ್ಲೆಗೆ ಯತ್ನ ಮಾಡಿದ್ರು ಎಂದು ಇಂಗಲಕುಪ್ಪೆ ಕೃಷ್ಣ ಕೂಡ ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ ಮಂಡ್ಯ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.