ತುಮಕೂರು: ನನ್ನ ನಡವಳಿಕೆಯನ್ನು ಅನವಶ್ಯಕವಾಗಿ ಯಾರೋ ಸಣ್ಣಪುಟ್ಟವರ ಜೊತೆಗೆ ಹೋಲಿಕೆ ಮಾಡಬೇಡಿ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಕಾರ್ಯಕ್ರಮದ ನಂತರ ಮಾತನಾಡಿದ ವಿ.ಸೋಮಣ್ಣ, ನಾನು ಹೇಳುವುದನ್ನೆಲ್ಲಾ 6 ತಾರೀಕಿನ ಬಳಿಕ ಹೇಳುತ್ತೇನೆ ಎಂದಿದ್ದೇನೆ. ಆಮೇಲೆ ಮಾತನಾಡುತ್ತೇನೆ, ಇಲ್ಲಿ ಬೇಡ. 45 ವರ್ಷ ನಾನು ಸಂಪೂರ್ಣವಾಗಿ ಈ ಮಠದಲ್ಲಿ ತೊಡಗಿಸಿಕೊಂಡಿದ್ದೇನೆ. ಹತ್ತಾರು ಕಾರ್ಯಕ್ರಮ ಮಾಡಿದ್ದೇನೆ. ಪಾರ್ಟಿ-ಗಿಟ್ಟಿ ನಮ್ಮ ತಲೆಯಲ್ಲಿ ಇಲ್ಲ.ಕೆಲ ನಾಯಿ ನರಿಗಳಿಂದ ಸ್ವಲ್ಪ ವ್ಯಾತ್ಯಾಸವಾಯ್ತು. ಸಿದ್ದಗಂಗಾ ಮಠವನ್ನು ಬೇರೆ ಮಠದೊಂದಿಗೆ ಹೋಲಿಕೆ ಮಾಡೋದು ಸರಿಯಲ್ಲ ಎಂದರು.
ಕಾಲ ಬಂದಾಗ ಮಾತನಾಡೋಣ. ನಾನು ಯಾವತ್ತು ಅಧೈರ್ಯವಂತ ಆಗಿಲ್ಲ. ಜಿ.ಪರಮೇಶ್ವರ್ ಜೊತೆಗೆ ಸ್ನೇಹವಿದೆ. ನನ್ನ ಬಗ್ಗೆ ಹೇಳಿದ್ದಾರೆ ಅದು ಅವರ ದೊಡ್ಡತನ.ನಾವೆಲ್ಲಾ 50 ವರ್ಷದ ಸ್ನೇಹಿತರು. ರಾಜಕಾರಣ ಬೇರೆ, ವೈಯಕ್ತಿಕ ಬೇರೆ. ಗಂಗಾಧರಪ್ಪ ನವರಿಂದಲೇ ನಮಗೆ ಇವರೆಲ್ಲಾ ಪರಿಚಯವಾಯ್ತು ಎಂದು ತಿಳಿಸಿದರು.
ಮಠ ಭಗವಂತ ಇದ್ದಂತೆ, ಆ ಸನ್ನಿಧಾನಕ್ಕೆ ಬಂದಿದ್ದೇವೆ. ಕೊಡೊದು ಬಿಡೊದು ಅವನಿಗೆ ಬಿಟ್ಟಿದ್ದು. ನ.30 ರಂದು ಹೈ ಕಮಾಂಡ್ ಟೈಮ್ ಕೊಟ್ಟಿತ್ತು. ಅವತ್ತು ನಾನು ಹೋಗಲಿಲ್ಲ ಎಂದು ಹೇಳಿದರು.
ಯತ್ನಾಳ್ ಒಬ್ಬ ಸುಸಂಸ್ಕೃತ ರಾಜಕಾರಣಿ. ನೇರವಾಗಿ ಹೇಳುವಂತಹವರು ಯಾರಿದ್ದಾರೆ. ಅವರ ನೋವನ್ನ ಡೈರೆಕ್ಟ ಆಗಿ ತೊಡಿಕೊಂಡಿದ್ದಾರೆ. ಯತ್ನಾಳ್ ಅವರು ಇತ್ತೀಚೆಗೆ ಭೇಟಿಯಾಗಿಲ್ಲ, ಕಾಲ ಬಂದಾಗ ಎಲ್ಲಾ ಸರಿ ಹೋಗುತ್ತೆ. ಸತ್ಯವನ್ನು ಮರೆ ಮಾಚಲು ಸಾಧ್ಯವಿಲ್ಲ. ಎರಡ್ಮೂರು ದಿನ ಕಾಯ್ತೇನೆ ಆಮೇಲೆ ಹೊರಗೆ ಹಾಕ್ತೀನಿ ಎಂದರು.
ಬೆಂಗಳೂರಿನಲ್ಲಿ 14-15 ವರ್ಷ ಮಂತ್ರಿ ಆಗಿದ್ದೆ ಅನ್ನೋದಕ್ಕಿಂತ. ಧ್ವನಿ ಇಲ್ಲದವರಿಗೆ ಕೆಲಸ ಮಾಡಿದ್ದೇನೆ. ನನ್ನ ನೇರ ನುಡಿಯ ಸಂಸ್ಕಾರ ಸಿದ್ದಗಂಗಾ ಮಠದಿಂದ ಬಂತು. ವರಿಷ್ಟರು ಯಾವ ರೀತಿ ನಡೆದುಕೊಳ್ಳಬೇಕು ಅಂತ ಹೇಳ್ತಾರೆ ಗೊತ್ತಿಲ್ಲ. ಅರ್ಹತೆ ಗುರುತಿಸುವ ಮಾನದಂಡ ಈ ರೀತಿ ಆಗಿರಬಾರದು. ಅರ್ಹತೆ ಅವಕಾಶ ವಂಚಿತವಾಗಬಾರದು. ಅರ್ಹತೆ ಯಾರ ಮನೆಯ ಸ್ವತ್ತಲ್ಲ. ಅರ್ಹತೆ ಇಲ್ಲದವರು ಹೇಗೆ ಬೇಕಾದ್ರೂ ನಡೆಕೊಳ್ಳಬಹುದು ಅಂತಿಲ್ಲ. ಹೈ ಕಮಾಂಡ್ ಆಗಿರುವ ತಪ್ಪನ್ನು ಯಾವ ರೀತಿ ಸರಿ ಪಡಿಸುತ್ತಾರೆ ಅನ್ನೋದು ಗೊತ್ತಿಲ್ಲ ಎಂದು ಹೇಳಿದರು.
ಸ್ವತಂತ್ರವಾಗಿ ಬೆಂಗಳೂರಿನಲ್ಲಿ ಗೆದ್ದು ಬಂದಿದ್ದೇನೆ. ಕೆಲವು ಸಂದರ್ಭದಲ್ಲಿ ನನ್ನ ದುರಂಹಕಾರ, ನಾನು ಮಾಡಿದಂತಹ ತೀರ್ಮಾನ ನಮಗೆ ತೊಂದರೆ ಕೊಡ್ತು. ಮೇಲೆ ಆಕಾಶವಿದೆ ಅಂತ ಆಕಾಶಕ್ಕೆ ಉಗುಳಿದೆ. ಅದು ನನ್ನ ಮೇಲೆ ಬಿದ್ದಿದೆ. ಅದನ್ನು ಒರಸಿಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದರು.