Saturday, April 19, 2025
Google search engine

Homeರಾಜ್ಯವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ: ಬಿ.ಸಿ.ಟ್ರಸ್ಟ್ ನ ತಾಲೂಕು ಯೋಜನಾಧಿಕಾರಿ ರಮೇಶ್

ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ: ಬಿ.ಸಿ.ಟ್ರಸ್ಟ್ ನ ತಾಲೂಕು ಯೋಜನಾಧಿಕಾರಿ ರಮೇಶ್

ಕೆ.ಆರ್.ನಗರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಮರ್ಥ ಜೀವನ ನಿರ್ವಹಣೆ ಮಾಡಲು ಶಿಕ್ಷಣ ಬಹಳ ಮುಖ್ಯವಾಗಿದ್ದು, ಅಂತೆಯೇ ಆರೋಗ್ಯವು ಮುಖ್ಯವಾಗಿದೆ. ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ನ ತಾಲೂಕು ಯೋಜನಾಧಿಕಾರಿ ರಮೇಶ್ ಹೇಳಿದರು.

ಪಟ್ಟಣದ ಲಯನ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಮಕ್ಕಳೇ ಈ ದೇಶದ ಸಂಸ್ಕೃತಿಯನ್ನು ಉಳಿಸುವಲ್ಲಿ ಮಹತ್ವ ಪಾತ್ರವಹಿಸಿಲಿದ್ದಾರೆ. ಮಕ್ಕಳು ಶಿಕ್ಷಣ, ಆರೋಗ್ಯದ ಜೊತೆಗೆ ಪಠ್ಯದೊಂದಿಗೆ ಕ್ರೀಡೆ ಮತ್ತು ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಕ್ಕಳಿಗೆ ತಿಳಿಸಿದರು.

ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ವಿರೇಂದ್ರ ಹೆಗ್ಡೆಯವರ ಕೃಪಾರ್ಶೀವಾದಿಂದ ಎಲ್ಲಾ ಕಡೆಗಳಲ್ಲಿ ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಶ್ರೀಕ್ಷೇತ್ರವು ಸೇವೆ ಮಾಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಲಯನ್ಸ್ ವಿದ್ಯಾ ಸಂಸ್ಥೆ ಅಧ್ಯಕ್ಷ ಬುದ್ದಿ ಸಾಗರ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಡಾ.ವಿರೇಂದ್ರಹೆಗ್ಡೆಯವರ ಸಮಾಜ ಸೇವಾ ಕಾರ್ಯವನ್ನು ಸ್ಮರಿಸುತ್ತಾ ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನ ಪಡೆದು ಇಂತಹ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಕ್ಕಳಿಗೆ ಕರೆ ನೀಡಿದರು.

ಈ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಲಯನ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಮೇಶ್ ಮತ್ತು ಸೂರ್ಯ ಸ್ಮಾಟ್ ಸಿಟಿ ಪಾಲುದಾರರಾದ ಸಿ.ಎಲ್.ರವೀಶ್ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಸಿ.ಲೋಕೇಶ್, ಖಜಾಂಚಿ ಹೆಚ್.ಸಿ.ಮಹದೇವಯ್ಯ, ಆಡಳಿತಾಧಿಕಾರಿ ಎಸ್.ಸದಾಶಿವ, ನಿರ್ದೇಶಕರಾದ ಕೆ.ಆರ್.ಸತ್ಯಕುಮಾರ್, ಲಯನ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಟಿ.ಪಿ.ನಂದೀಶ್‌ಕುಮಾರ್, ಲಯನ್ಸ್ ಪ್ರೌಢಶಾಲೆಯ ಮುಖ್ಯಶಿಕ್ಷಕರುಗಳಾದ ಎಲ್.ಎಸ್.ಲೋಕೇಶ್, ಜಿ.ರಮೇಶ್, ಶಿಕ್ಷಕರುಗಳಾದ ಹೆಚ್.ಎನ್.ದಿವಾಕರ್, ನಳಿನ, ಸತ್ಯವತಿ, ಸುಜಾತ, ಗಾಯಿತ್ರಿ, ಆಶಾ, ನಂದಿನಿ ಮತ್ತು ದೈಹಿಕ ಶಿಕ್ಷಕಿ ಪಾರ್ವತಿ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular