Sunday, April 20, 2025
Google search engine

Homeರಾಜ್ಯಸುದ್ದಿಜಾಲಜಿಲ್ಲಾಡಳಿತದಿಂದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ

ಜಿಲ್ಲಾಡಳಿತದಿಂದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ

ಮಡಿಕೇರಿ : ಜಿಲ್ಲಾಡಳಿತ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಗುರುವಾರ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು.

ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಆವರಣದಲ್ಲಿ ಯುದ್ಧ ಸ್ಮಾರಕದ ಜತೆಗೆ ಸೇನಾ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರಜೀತ್ ಸಿಂಗ್, ಜಿ. ಪಿ.ಎಂ. ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ಮುಖ್ಯಸ್ಥ ಕೆ.ರಾಮರಾಜನ್, ಎನ್‌ಸಿಸಿ ಅಧಿಕಾರಿ ಕರ್ನಲ್ ಜೆಫಿರಿನ್ ಅರಾನ್ಹಾ ಏರ್ ಮಾರ್ಷಲ್ (ನಿವೃತ್ತ) ಕೆ.ಸಿ.ಕಾರ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್. ವೀಣಾ, ಹೆಚ್ಚುವರಿ ಪೊಲೀಸ್ ಮುಖ್ಯ ಅಧಿಕಾರಿ ಸುಂದರರಾಜ್, ಏರ್ ಕಮಾಂಡರ್ (ನಿವೃತ್ತ) ಕಂಬೀರಂಡ ದೇವಯ್ಯ , ಲೆ. ಕರ್ನಲ್ (ನಿವೃತ್ತ) ಎಂ.ನಾಚಪ್ಪ, ಮೇಜರ್ (ನಿವೃತ್ತ) ಒ.ಎಸ್.ಚಿಂಗಪ್ಪ, ಮಡಿಕೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕುಟ್ಟಪ್ಪ, ಆದಾಯ ತೆರಿಗೆ ಇಲಾಖೆ ಅಧಿಕಾರಿ ಗಿರೀಶ್, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಾಲಸುಬ್ರಮಣ್ಯಂ, ಎ.ಪಿ.ಸುಬ್ಬಯ್ಯ, ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ, ಉಪ ಪೊಲೀಸ್ ಅಧಿಕಾರಿ ಜಗದ್ ಸೀನೀಶೂರ ರೆಡ್ ಕ್ರಾಸ್ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಅನಿಲ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ, ಇತರರು ಪುಷ್ಪಗುಚ್ಛ ನೀಡಿ ಗೌರವ ಸಲ್ಲಿಸಿದರು. ಪೊಲೀಸ್ ಇಲಾಖೆ ಮೂರು ಸುತ್ತು ಕುಶಾಲ ತೋಪುಗಳನ್ನು ಹಾರಿಸಿ ಶ್ರದ್ಧಾಂಜಲಿ ಸಲ್ಲಿಸಿ ಮೌನ ಆಚರಿಸಿತು.

ಜಿ.ಪಂ. ಸಿಇಒ ವರ್ಣಿತ್ ನೇಗಿ ಸಶಸ್ತ್ರ ಪಡೆಗಳ ಧ್ವಜವನ್ನು ಬಿಡುಗಡೆ ಮಾಡಿದರು. ಪೊಲೀಸ್ ಇಲಾಖೆಯ ಎಆರ್ ಎಸ್ ಐ ಚೆನ್ನಕೇಶವ ವಂದನಾರ್ಪಣೆ ಮಾಡಿದರು. ಅದೇ ರೀತಿ ಪೊಲೀಸ್ ವಾದ್ಯವೃಂದದ ನೇತೃತ್ವದಲ್ಲಿ ಸಿದ್ದೇಶ್ ತಂಡ ಪೊಲೀಸ್ ವಾದ್ಯದೊಂದಿಗೆ ಗೌರವ ವಂದನೆ ಸಲ್ಲಿಸಿತು. ಮಾಜಿ ಸೈನಿಕರು, ಪೊಲೀಸರು, ಸೈನಿಕ ಶಾಲೆಯ ಎನ್ ಸಿಸಿ ವಿದ್ಯಾರ್ಥಿಗಳು, ಇತರರು ಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಏರ್ ಮಾರ್ಷಲ್ (ನಿವೃತ್ತ) ಕೆ. ಸಿ.ದೇಶದ ಗಡಿಯಲ್ಲಿ ಹಗಲಿರುಳು ದುಡಿಯುವ ವೀರ ಸೈನಿಕರ ಧೈರ್ಯ ಮತ್ತು ಸಾಹಸವನ್ನು ಎಲ್ಲರೂ ಮೆಚ್ಚಲೇಬೇಕು. ವೀರ ಸೈನಿಕರ ಕಷ್ಟಗಳಿಗೆ ಸ್ಪಂದಿಸಬೇಕು, ಹುತಾತ್ಮರನ್ನು ಸದಾ ಸ್ಮರಿಸಬೇಕು.

RELATED ARTICLES
- Advertisment -
Google search engine

Most Popular