Monday, April 21, 2025
Google search engine

Homeರಾಜ್ಯಸುದ್ದಿಜಾಲಪಿರಿಯಾಪಟ್ಟಣ:ಎನ್ಎಸ್ಎಸ್ ವಿಶೇಷ ವಾರ್ಷಿಕ ಶಿಬಿರ

ಪಿರಿಯಾಪಟ್ಟಣ:ಎನ್ಎಸ್ಎಸ್ ವಿಶೇಷ ವಾರ್ಷಿಕ ಶಿಬಿರ

ಪಿರಿಯಾಪಟ್ಟಣ: ತಾಲೂಕಿನ ಭುವನಹಳ್ಳಿ ಗ್ರಾಮದಲ್ಲಿ ಬೆಟ್ಟದಪುರದ ಎಸ್ಎಂಎಸ್ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿರುವ ಎನ್ಎಸ್ಎಸ್ ವಿಶೇಷ ವಾರ್ಷಿಕ ಶಿಬಿರದಲ್ಲಿ ಪಿರಿಯಾಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಉಪನ್ಯಾಸಕರಾದ ನಂಜುಂಡಸ್ವಾಮಿ ಅವರು ಬಸವಣ್ಣನ ವಚನಗಳ ಪ್ರಸ್ತುತತೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಮನಸ್ಸು ಮತ್ತು ದೇಹ ಹೊರನೋಟಕ್ಕೆ ಸುಂದರವಾಗಿದ್ದು ಕೆಟ್ಟ ಆಲೋಚನೆಗಳನ್ನು ಮೈಗೂಡಿಸಿಕೊಂಡಾಗ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗುವುದಿಲ್ಲ
ಒಳ್ಳೆಯ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ವ್ಯಕ್ತಿ ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶಕನಾಗುತ್ತಾನೆ ಈ ನಿಟ್ಟಿನಲ್ಲಿ ಬಸವಣ್ಣನವರ ವಚನಗಳು ಅಜರಾಮರ, ಜೀವನದಲ್ಲಿ ಮಹಾನ್ ಸಂತರ ಜೀವನ ದಾರಿಗಳನ್ನು ಅಳವಡಿಸಿಕೊಂಡು ಸದ್ ಮಾರ್ಗದಲ್ಲಿ ನಡೆಯುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಿಆರ್ ಪಿ ಚೇತನ್ ಅವರು ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ವಿದ್ಯೆ ಕಲಿತರೆ ಸಾಲದು ಅದಕ್ಕೆ ಸರಿಸಮನಾದ ಜ್ಞಾನ ಪಡೆದುಕೊಳ್ಳಬೇಕು ವಿದ್ಯಾರ್ಥಿಗಳು ಅಂಕಗಳಿಗೆ ಓದದೆ ಸಾಮಾಜಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ತಿಳಿಸಿದರು.

ನಿವೃತ್ತ ಮುಖ್ಯ ಶಿಕ್ಷಕ ಬಿ.ಟಿ ಸಣ್ಣಸ್ವಾಮಿಗೌಡ ಅವರು ಮಾತನಾಡಿ ಸರ್ಕಾರದ ಆದೇಶದಂತೆ ಪದವಿಪೂರ್ವ ಕಾಲೇಜುಗಳಲ್ಲಿ ಎನ್ಎಸ್ಎಸ್ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಇದರಿಂದ ಹಲವಾರು ಬಗೆಯ ವಿಚಾರ ತಿಳಿದು ಅನುಭವ ಪಡೆಯಬಹುದು, ಶಿಸ್ತು ಸಂಯಮ ಅಳವಡಿಸಿಕೊಳ್ಳಲು ಎನ್ಎಸ್ಎಸ್ ಶಿಬಿರಗಳು ಸಹಕಾರಿಯಾಗಲಿದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ ಅವರು ಮಾತನಾಡಿ ಎನ್ಎಸ್ಎಸ್ ಶಿಬಿರ ಆಯೋಜನೆ ಒಂದು ವಿಶೇಷವಾಗಿದೆ, ಸೂಕ್ತ ಮಾರ್ಗದರ್ಶನ ಮತ್ತು ಸಮರ್ಪಕವಾದ ಮಾಹಿತಿ ತಿಳುವಳಿಕೆಯಿಂದ ಸಾಧನೆಯ ಗುರಿ ತಲುಪಲು ಸಾಧ್ಯವಾಗುತ್ತದೆ, ಶಿಬಿರದಲ್ಲಿ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಿದ ಶಿಬಿರಾರ್ಥಿಗಳ ಕಾರ್ಯ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ನಂದಿನಿ ಸುರೇಶ್, ಪವಿತ್ರ ರವಿ, ಚಂದ್ರಣ್ಣ, ಎಸ್ಎಂಎಸ್ ಸಂಸ್ಥೆ ಪ್ರಾಂಶುಪಾಲರಾದ ಎಸ್.ಕೆ ರಾಜು, ಶಿಬಿರಾಧಿಕಾರಿ ಕುಬೇರ್, ಸಹ ಶಿಬಿರಾಧಿಕಾರಿ ಡಿ.ವಿ ಸತೀಶ್, ಜೆ.ಎಸ್ ಯಶವಂತ್ ಕುಮಾರ್, ಉಪನ್ಯಾಸಕರಾದ ಪ್ರತಾಪ್, ಹರ್ಷಿತ, ಬಸವರಾಜು ಮತ್ತು ಶಿಬಿರಾರ್ಥಿಗಳು ಇದ್ದರು.

RELATED ARTICLES
- Advertisment -
Google search engine

Most Popular