ಮಂಡ್ಯ: ಮಂಡ್ಯದಲ್ಲಿ ಭ್ರೂಣಲಿಂಗ ಪತ್ತೆ, ಹತ್ಯೆ ಪ್ರಕರಣದ ಹಿನ್ನಲೆ ಮಂಡ್ಯ ತಾಲ್ಲೂಕು ಆಡಳಿತ ಅಲರ್ಟ್ ಆಗಿದ್ದು, ಖಾಸಗಿ ನರ್ಸಿಂಗ್ ಹೋಮ್ ಗಳಿಗೆ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಹಶೀಲ್ದಾರ್ ಶಿವಕುಮಾರ್ ಬೀರದರ್ ನೇತೃತ್ವದ ಅಧಿಕಾರಿಗಳ ತಂಡ ಮಂಡ್ಯ ನಗರದ ಕೃಪಾ, ರವಿ, ವಿನಾಯಕ ನರ್ಸಿಂಗ್ ಹೋಮ್ ಗಳಿಗೆ ಭೇಟಿ ನೀಡಿದ್ದು, ವೈದ್ಯರ ಬಳಿ ಭ್ರೂಣ ಹತ್ಯೆ ಸಂಬಂಧ ಮಾಹಿತಿ ಪಡೆದಿದ್ದಾರೆ.

ಯಾವುದೇ ರೀತಿಯ ಕೃತ್ಯಗಳು ನಡೆಯದಂತೆ ಎಚ್ಚರಿಕೆಯನ್ನು ನೀಡಿದ್ದಾರೆ. ಅಲ್ಲದೇ ನರ್ಸಿಂಗ್ ಹೋಮ್ ಗಳಲ್ಲಿ ಲೋಪ ದೋಷ ಕಂಡುಬಂದರೆ ಕಾನೂನು ಕ್ರಮ ಸೂಚನೆ ನೀಡಿದ್ದಾರೆ.
ಸ್ಕ್ಯಾನಿಂಗ್ ಸೆಂಟರ್’ಗಳಿಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಹಶೀಲ್ದಾರ್ ಶಿವಕುಮಾರ್ ಬೀರಾದರ್ ಗೆ ಟಿಎಚ್ ಓ ಡಾ.ಜವರೇಗೌಡ, ಇಓ ವೀಣಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣಧಿಕಾರಿ, ಪೊಲೀಸರು ಸಾಥ್ ನೀಡಿದ್ದರು.