Sunday, April 20, 2025
Google search engine

Homeರಾಜ್ಯಸುದ್ದಿಜಾಲಡಿ. ೯, ೧೦ರಂದು ಚಾಮರಾಜನಗರದಲ್ಲಿ ವಿದ್ಯುತ್ ವ್ಯತ್ಯಯ

ಡಿ. ೯, ೧೦ರಂದು ಚಾಮರಾಜನಗರದಲ್ಲಿ ವಿದ್ಯುತ್ ವ್ಯತ್ಯಯ

ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಚಾಮರಾಜನಗರ ಮತ್ತು ಸಂತೇಮರಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿ ೩ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಡಿ. ೯ ಮತ್ತು ೧೦ ರಂದು ಹಮ್ಮಿಕೊಂಡಿರುವುದರಿಂದ ಆಯಾ ದಿನದಂದು ಬೆಳಿಗ್ಗೆ ೯ ರಿಂದ ಸಂಜೆ ೫ ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಡಿ. ೯ರಂದು ಹೊಂಗನೂರು, ಇರಸವಾಡಿ, ಮಸಣಾಪುರ, ಚಾಟಿಪುರ, ಗಂಗವಾಡಿ, ಬೂದಂಬಳ್ಳಿ, ಬೂದಂಬಳ್ಳಿ ಮೋಳೆ, ಗೂಳಿಪುರ, ಹೊಮ್ಮ, ರೇಚಂಬಳ್ಳಿ, ಹೆಚ್. ಮೂಕಳ್ಳಿ, ಕುರುಬರಹುಂಡಿ ಹಾಗೂ ಉಮ್ಮತ್ತೂರು, ಬಾಗಳಿ, ಲಿಂಗಣಾಪುರ, ಜನ್ನೂರು, ಜನ್ನೂರು ಹೊಸೂರು, ಹಳ್ಳಿಕೆರೆಹುಂಡಿ, ಗಣಗನೂರು, ಗಣಗನೂರುಪುರ, ನವಿಲೂರು, ಆಲ್ದೂರು, ಬಿಎಂಕೆ ಹುಂಡಿ, ಗೊದ್ದಲಹುಂಡಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಡಿ. ೧೦ರಂದು ಹಿರಿಕೆರೆ, ಕಾಳಿಕಾಂಬ ಕಾಲೋನಿ, ಚಂದಕವಾಡಿ, ರೇಚಂಬಳ್ಳಿ, ಮಲ್ಲೇದೇವನಹಳ್ಳಿ, ನವೋದಯ, ಹೊಂಡರಬಾಳು, ಜ್ಯೋತಿಗೌಡನಪುರ ಹಾಗೂ ಬದನಗುಪ್ಪೆ, ಪಣ್ಯದಹುಂಡಿ, ಬೆಂಡರವಾಡಿ, ಕೆಲ್ಲಂಬಳ್ಳಿ ಎನ್‌ಜೆವೈ, ಇಂಡಸ್ಟ್ರಿಯಲ್ ಏರಿಯಾ, ಕೆಇಡಿಪಿ ೧೦ ಮತ್ತು ೧೧, ಮುತ್ತಿಗೆ, ಹೆಗ್ಗೋಠಾರ ಹಾಗೂ ಕೆಐಎಡಿಬಿ ಇಂಡಸ್ಟ್ರೀಯಲ್ ಏರಿಯಾ ಮರಿಯಾಲ, ಬೇಡರಪುರ, ಕೆಲ್ಲಂಬಳ್ಳಿ, ಬಸವನಪುರ ಮತ್ತು ಸಿದ್ದಯ್ಯನಪುರ, ಹೊಂಗಲವಾಡಿ, ಕೋಳಿಪಾಳ್ಯ, ಬಂಧಿಗೌಡನಹಳ್ಳಿ, ಅಟ್ಟುಗೂಳಿಪುರ ಹಾಗೂ ಕೊತ್ತಲವಾಡಿ, ಅರಕಲವಾಡಿ, ಯರಗನಹಳ್ಳಿ, ಸುವರ್ಣನಗರ, ಫ್ಯಾಕ್ಟರಿ, ಬಿಸಿಲವಾಡಿ, ಪುಣಜನೂರು, ಡೊಳ್ಳಿಪುರ, ಚನ್ನಪನಪುರ, ಅಮಚವಾಡಿ, ಮಾದಲವಾಡಿ ಮತ್ತು ಕಿಲಿಗೆರೆ, ಮಾದಲವಾಡಿ, ಉನಗುಂಬ, ಯರಗನಹಳ್ಳಿ, ಅಚ್ಚಟ್ಟಿಪುರ, ಯಾನಗಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಾರ್ವಜನಿಕರು ನಿಗಮದ ಜೊತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.ಸಂ ೧೯೧೨ ಸಂಪರ್ಕಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆ

RELATED ARTICLES
- Advertisment -
Google search engine

Most Popular