Monday, April 21, 2025
Google search engine

Homeಸ್ಥಳೀಯಡಿ.೧೭ ರಂದು ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಸಾಧಕರಿಗೆ ಸನ್ಮಾನ

ಡಿ.೧೭ ರಂದು ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಸಾಧಕರಿಗೆ ಸನ್ಮಾನ

ಮೈಸೂರು: ನಗರದ ಮಾನವ ಹಕ್ಕುಗಳ ಸೇವಾ ಸಮಿತಿಯಿಂದ ಡಿ.೧೭ ಕ್ಕೆ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಕಾನೂನು ಅರಿವು-ನೆರವು ಕಾರ್ಯಕ್ರಮ, ೭ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಈ ಕುರಿತು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಮಿತಿಯ ರಾಜ್ಯಾಧ್ಯಕ್ಷೆ ಸೀತಾ ರಾಮೇಗೌಡ ಮಾತನಾಡಿ, ಡಿ.೧೭ ರಂದು ನಗರದ ಪುರಭವನದಲ್ಲಿ ಎ.ಎಸ್.ಜಿ. ಕಣ್ಣಿನ ಆಸ್ಪತ್ರೆ ವತಿಯಿಂದ ಉಚಿತ ಕಣ್ಣು ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣೆ ಮತ್ತು ಮಧುಮೇಹ, ಬಿ.ಪಿ, ಉಚಿತ ಪರೀಕ್ಷೆ ನಡೆಸಲಾಗುವುದು. ಮಾಜಿ ವಿವಿಧ ಕ್ಷೇತ್ರದ ಸಾಧಕರಿಗೆ ಮಾನವ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇದೇ ವೇಳೆ ಮಹಿಳಾ ಪೌರ ಕಾರ್ಮಿಕರು ಹಾಗೂ ಅನ್ನದಾತ ರೈತರಿಗೆ ಸನ್ಮಾನ ಸಹ ಮಾಡುವುದಾಗಿ ಹೇಳಿದರು.

ಹೆಚ್ಚಿನ ಮಾಹಿತಿಗೆ ಮೊ. ೮೮೬೭೬೮೮೬೭೬, ಸಂಪರ್ಕಿಸುವಂತೆ ಕೋರಿದರು. ಸಮಿತಿಯ ಕಾನೂನು ಸಲಹೆಗಾರ ಗೋವಿಂದರಾಜು, ಕಾರ್ಯಾಧ್ಯಕ್ಷ ತೇಜಸ್ ಪೃಥ್ವಿ ರಾಜ್, ಮೈಸೂರು ಮಹಿಳಾ ಜಿಲ್ಲಾಧ್ಯಕ್ಷೆ ಡಾ.ಸವಿತಾರಾಜ್ಯ ಗೋಷ್ಠಿಯಲ್ಲಿದ್ದರು.

RELATED ARTICLES
- Advertisment -
Google search engine

Most Popular