ಮಂಗಳೂರು(ದಕ್ಷಿಣ ಕನ್ನಡ): ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಮರಿಗೆ 10000 ಕೋಟಿ ಅನುದಾನ ಕೊಡುವುದಾಗಿ ಹೇಳಿದ್ದಾರೆ. ಹಾಗೂ ಸಿದ್ದರಾಮಯ್ಯನವರು ಶಂಕಿತ ಐಸಿಸ್ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಕ್ರಮಕೈಗೊಳ್ಳಬೇಕು ಹಾಗೂ ಸಿದ್ಧರಾಮಯ್ಯನವರ ಸರಕಾರವನ್ನು ವಜಾಮಾಡಬೇಕೆಂದು ವಿಶ್ವ ಹಿಂದೂ ಪರಿಷದ್ ಮಂಗಳೂರಲ್ಲಿ ಆಗ್ರಹಿಸಿದೆ.
ಡಿಸೆಂಬರ್ ನಾಲ್ಕರ ಸೋಮವಾರ ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಈಗಾಗಲೇ ನಾಲ್ಕು ಸಾವಿರ ಕೋಟಿ ಅನುಧಾನ ನೀಡಿದ್ದು, ಮುಂದಿನ ವರ್ಷ ಮುಸ್ಲಿಮರಿಗೆ ಹತ್ತು ಸಾವಿರ ಕೋಟಿ ಅನುಧಾನ ಖಂಡಿತವಾಗಿ ಕೊಟ್ಟ ಕೊಡುತ್ತೇನೆ ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ, ಈ ಹೇಳಿಕೆ ಸಂವಿಧಾನ ವಿರೋಧಿಯಾಗಿದ್ದು, ಮುಸ್ಲಿಮರಿಗೆ ಪ್ರತೇಕ ಅನುದಾನ ಕೊಡಲು ಸಂವಿಧಾನದಲ್ಲಿ ಅವಕಾಶವಿರುವುದಿಲ್ಲ Article 29 ವ್ಯಾಖ್ಯೆಯ ಪ್ರಕಾರ ಮುಸ್ಲಿಮರಿಗೆ ವಿಶೇಷ ಅನುದಾನ ನೀಡಲು ಸಂವಿಧಾನದಲ್ಲಿ ಅವಕಾಶವಿರುವುದಿಲ್ಲ.
ಅಲ್ಪಸಂಖ್ಯಾತರಲ್ಲಿ ಆರು ಧರ್ಮಿಯರಿದ್ದು ಅವುಗಳನ್ನು ಸಮಾನವಾಗಿ ನೋಡಬೇಕಾಗಿರುವಾಗ, ಮುಸ್ಲಿಂ ಒಂದು ಸಮುದಾಯಕ್ಕೆ ಮಾತ್ರ ಅದು ಅಗಾಧ ಪ್ರಮಾಣದಲ್ಲಿ ಅನುದಾನ ನೀಡಿರುವುದು ಸಂವಿಧಾನ ಬಾಹಿರವಾಗಿದೆ. ಮಾತ್ರವಲ್ಲ ಇದು ರಾಜ್ಯದಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಕೆಲಸವಾಗಿರುತ್ತದೆ. ಈ ಎಲ್ಲಾ ಕಾರಣದಿಂದಾಗಿ ಸಂವಿಧಾನ ವಿರೋಧವಾಗಿ ರಾಜ್ಯದ ಖಜಾನೆಯನ್ನು ಅಗಾಧ ಪ್ರಮಾಣದಲ್ಲಿ ಖರ್ಚು ಮಾಡುತ್ತಿರುವ ಸಿದ್ದರಾಮಯ್ಯ ಸರಕಾರವನ್ನು ವಜಾಗೊಳಿಸಲು ಘನವೆತ್ತ ರಾಜ್ಯಪಾಲರಲ್ಲಿ ಜಿಲ್ಲಾಧಿಕಾರಿಗಳ ಮುಖೇನ ಮನವಿ ಸಲ್ಲಿಸಲಾಯಿತು.
04 ಡಿಸೆಂಬರ್ 2023 ಸೋಮವಾರ ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಸಿದ್ದರಾಮಯ್ಯನವರ ಜೊತೆ ಅದೇ ವೇದಿಕೆಯಲ್ಲಿ ತನ್ವೀರ್ ಪೀರಾ ಎಂಬ ಮುಸ್ಲಿಂ ಮೌಲ್ವಿಗೆ ಶಂಕಿತ ಭಯೋತ್ಫಾದಕ ಸಂಘಟನೆಗಳ ಜೊತೆ ನಂಟು ಇರುವುದು ಮಾಧ್ಯಮಗಳ ಮೂಲಕ ಬಹಿರಂಗವಾಗಿದ್ದು, ಅಲ್ಲದೆ ವಿಧಾನ ಸಭಾ ಸದಸ್ಯರಾದ ಬಸವನ ಗೌಡ ಯತ್ನಾಳ್ ರವರು ಟ್ವಿಟ್ಟರ್ ಮೂಲಕ ” ತನ್ವೀರ್ ಪೀರಾ ಎಂಬ ವ್ಯಕ್ತಿಗೆ ಭಯೋತ್ಫಾದಕ ಸಂಘಟನೆಗಳ ನಂಟು ಇದ್ದು, ಈತ ಸೌದಿ , ಯಮನ್, ಹಾಗು ಮಧ್ಯಪ್ರಾಚ್ಯ ದೇಶಗಳ ಪ್ರವಾಸದಲ್ಲಿ ಭಯೋತ್ಫಾದಕ ಸಂಘಟನೆಯ ಮುಖಂಡರನ್ನು ಭೇಟಿಯಾಗಿರುವ ಫೋಟೋ ಹಂಚಿಕೊಂಡಿದ್ದು ಅಲ್ಲದೆ ಈ ವ್ಯಕ್ತಿ ಭಾರತದ ಚಟುವಟಿಕೆಗಳನ್ನು ಅರಬ್ ದೇಶಗಳಿಗೆ ರವಾನಿಸುವ ದೇಶದ್ರೋಹಿ ಕೆಲಸದ ಬಗ್ಗೆ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ಹೀಗಾಗಿ ಇದು ದೇಶದ ಆಂತರಿಕ ಭದ್ರತೆಗೆ ಸವಾಲಾಗಿದ್ದು ಹಾಗಾಗಿ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಕ್ರಮಕೈಗೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್, ಜಿಲ್ಲಾಧ್ಯಕ್ಷರಾದ ಎಚ್ ಕೆ ಪುರುಷೋತ್ತಮ, ಬಜರಂಗದಳ ವಿಭಾಗ ಸಹಸಂಯೋಜಕ್ ಪುನೀತ್ ಅತ್ತಾವರ, ಜಿಲ್ಲಾ ಉಪಾಧ್ಯಕ್ಷರು ಮನೋಹರ್ ಸುವರ್ಣ, ಜಿಲ್ಲಾ ಧರ್ಮಾಯಥಾ ಪ್ರಮುಖ್ ಸಂತೋಷ್ ಕದ್ರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.