Tuesday, April 22, 2025
Google search engine

Homeರಾಜ್ಯವರ್ತೂರ್ ಸಂತೋಷ್ ಗೆ ಹಳ್ಳಿಕಾರ್ ಒಡೆಯರ್ ಹೆಸರು: ಸ್ಪಷ್ಟೀಕರಣಕ್ಕೆ ರೈತರ ಆಗ್ರಹ

ವರ್ತೂರ್ ಸಂತೋಷ್ ಗೆ ಹಳ್ಳಿಕಾರ್ ಒಡೆಯರ್ ಹೆಸರು: ಸ್ಪಷ್ಟೀಕರಣಕ್ಕೆ ರೈತರ ಆಗ್ರಹ

ಮಂಡ್ಯ: ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ವಿರುದ್ಧ ಹುಲಿ ಉಗುರು ಪ್ರಕರಣದ ಬೆನ್ನಲ್ಲೇ ಮತ್ತೊಂದು ವಿವಾದ ಭುಗಿಲೆದ್ದಿದ್ದು, ತಮ್ಮ ವರ್ಚಸ್ಸಿಗಾಗಿ ಹಳ್ಳಿಕಾರ್ ಹೆಸರು ಬಳಸಿಕೊಂಡ್ರಾ ಎಂಬ ಅನುಮಾನ ವ್ಯಕ್ತವಾಗಿದೆ.

ವರ್ತೂರ್ ಸಂತೋಷ್ ಗೆ ಹಳ್ಳಿಕಾರ್ ಒಡೆಯರ್ ಎಂಬ  ಹೆಸರು ಕೊಟ್ಟ ಹಿನ್ನೆಲೆ ಹಳ್ಳಿಕಾರ್ ತಳಿ ಹೆಸರಿಗೆ ವರ್ತೂರ್ ಸಂತೋಷ್ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ವರ್ತೂರ್ ಸಂತೋಷ ವಿರುದ್ಧ ರೈತರು ತಿರುಗಿ ಬಿದ್ದಿದ್ದಾರೆ.

ಹಳ್ಳಿಕಾರ್ ಒಡೆಯರ್ ಹೆಸರಿಗೆ ಸ್ಪಷ್ಟೀಕರಣ  ನೀಡುವಂತೆ ಮಂಡ್ಯದಲ್ಲಿ ಹಳ್ಳಿಕಾರ್ ಗೋವು ಸಾಕಾಣಿಕೆ ರೈತರು ಆಗ್ರಹಿಸಿದ್ದಾರೆ.

ಡಿ.10 ರಂದು ಮಂಡ್ಯದ ಸಿಲ್ವರ್ ಜ್ಯೂಬಲಿ ಪಾರ್ಕ್ ನಲ್ಲಿ ಹಳ್ಳಿಕಾರ್ ಬಗ್ಗೆ ಚರ್ಚಾಗೋಷ್ಟಿ ನಡೆಯಲಿದ್ದು,  ಹಳ್ಳಿಕಾರ್ ಚರ್ಚೆಗೆ ವರ್ತೂರ್ ಸಂತೋಷ್ ಗೂ ಆಹ್ವಾನ ನೀಡಿದ್ದಾರೆ.

ಹಳ್ಳಿಕಾರ್ ಹೆಸರು ಒಂದು ಇತಿಹಾಸ ಇರುವಂತಹದ್ದು. ಅಂತಹ ಹೆಸರಿಗೆ ಅಪಮಾನ ಮಾಡುವುದು ಸರಿಯಲ್ಲ. ತಲೆಮಾರಿನಿಂದ ನಮ್ಮ ಹಿರಿಯರು ಹಳ್ಳಿಕಾರ್ ಗೋ ತಳಿ ಬೆಳೆಸಿಕೊಂಡು ಬಂದಿದ್ದಾರೆ. ಹಳ್ಳಿಕಾರ್ ಒಡೆಯ ಎನ್ನುವುದಕ್ಕೆ ಒಂದು ಮಹತ್ವ ಇದೆ. ಹಳ್ಳಿಕಾರ್ ಗೋವುಗಳನ್ನ ಸಾಕುತ್ತಿರುವ ಮೂಲ ರೈತರು ಎಷ್ಟು ಜನ ಇದ್ದಾರೆ. ವರ್ತೂರ್ ಸಂತೋಷ್ ಇತ್ತೀಚೆಗೆ ಬಂದು ಹಳ್ಳಿಕಾರ್ ಒಡೆಯರ್ ಹೆಸರು ಇಟ್ಟುಕೊಳ್ಳೋದು ಸರಿಯಲ್ಲ. ವರ್ತೂರ್ ಸಂತೋಷ್ ಅವರು ಒಬ್ಬ ಹಳ್ಳಿಕಾರ್ ಗೋವು ಸಾಕಾಣಿಕೆದಾರ ಅಷ್ಟೇ. ಅವರಿಗೆ ಅವರೇ ಹಳ್ಳಿಕಾರ್ ಒಡೆಯ ಅನ್ನೋದು ಸರಿಯಲ್ಲ. ಇದಕ್ಕೆ ಅವರು ಬಿಗ್ ಬಾಸ್ ನಿಂದ ಬಂದ ತಕ್ಷಣವೇ ಸ್ಪಷ್ಟೀಕರಣ ನೀಡಿ ಆ ಹೆಸರನ್ನು ಬಳಸದೇ ತೆಗೆದುಹಾಕಬೇಕು. ಇಲ್ಲ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುತ್ತೇವೆ. ಎಂದು  ವರ್ತೂರ್ ಸಂತೋಷ್ ಗೆ ರೈತರು ಎಚ್ಚರಿಕೆ ನೀಡಿದ್ದಾರೆ.

ಕೆಲವು ಯೂಟ್ಯೂಬ್ ಗಳಲ್ಲಿ ಹಳ್ಳಿಕಾರ್ ಒಡೆಯ ಎಂದು ಬಿಂಬಿಸುವುದು ತಪ್ಪು. ಮಂಡ್ಯದಲ್ಲಿ ಹಳ್ಳಿಕಾರ್ ತಳಿಯ ಬಗ್ಗೆ ಚರ್ಚಾ ವೇದಿಕೆ ಸಿದ್ದಪಡಿಸಿದ್ದೇವೆ. ಹಿರಿಯ ರೈತರು, ಪಶುವೈದ್ಯರು, ವಿಜ್ಞಾನಿಗಳು, ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

RELATED ARTICLES
- Advertisment -
Google search engine

Most Popular