Saturday, April 19, 2025
Google search engine

Homeರಾಜ್ಯಸುದ್ದಿಜಾಲದೇವಾಲಯಗಳು ಮನುಷ್ಯನಲ್ಲಿ ಶಕ್ತಿ ಮತ್ತು ಸಂಸ್ಕಾರವನ್ನು ನೀಡುವ ಪ್ರಾರ್ಥನಾ ಮಂದಿರ-ಶಾಸಕ ಡಿ.ರವಿಶಂಕರ್

ದೇವಾಲಯಗಳು ಮನುಷ್ಯನಲ್ಲಿ ಶಕ್ತಿ ಮತ್ತು ಸಂಸ್ಕಾರವನ್ನು ನೀಡುವ ಪ್ರಾರ್ಥನಾ ಮಂದಿರ-ಶಾಸಕ ಡಿ.ರವಿಶಂಕರ್

ಹೊಸೂರು : ಮನುಷ್ಯನ ದೇಹಕ್ಕೆ ಅನಾರೋಗ್ಯ ಬಂದರೆ ಆಸ್ಪತ್ರೆಗಳಿಗೆ ಹೋಗಿ ಸರಿಪಡಿಸಿ ಕೊಳ್ಳಬಹುದು. ಆದರೆ ಅಂತರಂಗ ಮನಸ್ಸಿಗೆ ಅನಾರೋಗ್ಯ ಬಂದರೆ ಯಾವ ಆಸ್ಪತ್ರೆಯಲ್ಲೂ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಗುಣಪಡಿಸುವ ಶಕ್ತಿ ಇರುವುದು ದೇಗುಲಗಳು ಹಾಗೂ ಧಾರ್ಮಿಕ ಶಕ್ತಿ ಕೇಂದ್ರಗಳಲ್ಲಿ ಮಾತ್ರ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು
ಸಾಲಿಗ್ರಾಮ ತಾಲೂಕಿನ ದಿಡ್ಡಹಳ್ಳಿ ಗ್ರಾಮದ ಹೊರವಲಯದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಶ್ರೀ ದೊಡ್ಡಮ್ಮ ತಾಯಿ ದೇಗುಲ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇವಾಲಯಗಳು ಮನುಷ್ಯನಲ್ಲಿ ಶಕ್ತಿ ಮತ್ತು ಸಂಸ್ಕಾರವನ್ನು ನೀಡುವ ಪ್ರಾರ್ಥನಾ ಮಂದಿರಗಳಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ದೇವಾಲಯಗಳನ್ನು ನಿರ್ಮಿಸುವುದರಿಂದ ಜನರಲ್ಲಿ ಭಕ್ತಿ ಹೆಚ್ಚಾಗಲಿದ್ದು, ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಪ್ರತೀಕ ತಾಣದ. ಜತೆಗೆ ಜನರಲ್ಲಿ ಸಾಮರಸ್ಯ ಮೂಡಿ ಭಕ್ತಿಯ ಮನೋಭಾವ ಬೆಳೆದು ಐಕ್ಯತೆಯಿಂದ ಜೀವನ ಸಾಗಿಸಲು ಸಹಕಾರಿಯಾದದ್ದು. ಇಂದಿನ ಯುವ ಜನಾಂಗ ನಮ್ಮ ಪೂರ್ವಿಕರ ಕಾಲದಿಂದ ನಡೆದು ಬಂದಿರುವಂತಹ ಧಾರ್ಮಿಕ ಆಚರಣೆಗಳು ಹಾಗೂ ಗ್ರಾಮದಲ್ಲಿನ ದೇಗುಲಗಳ ನಿರ್ಮಾಣದ ಸತ್ಕಾರ್ಯಗಳಿಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಹೇಳಿದರು.
ನನ್ನ ಮತ ಕ್ಷೇತ್ರದ ಅವಳಿ ತಾಲೂಕು ಈಗಾಗಲೇ ಬರ ಪೀಡಿತ ಎಂದು ಘೋಷಣೆಯಾಗಿದ್ದು. ರೈತರಿಗೆ ಅನುಕೂಲವಾಗುವಂತೆ ಎಲ್ಲಾ ರೀತಿಯಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜತೆಗೆ ಎಫ್.ಐ. ಡಿ ಮೂಲಕ ನಿಮ್ಮ ಖಾತೆಗೆ ಸರಕಾರ ಬರ ಪರಿಹಾರದ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗುವುದು. ಯಾರೆಲ್ಲ ಎಫ್.ಐ. ಡಿ ಮಾಡಿಸಿಲ್ಲ ಅವರು ಕೂಡಲೇ ಎಫ್ .ಐ. ಡಿ ಮಾಡಿಸುವ ಮೂಲಕ ಸರಕಾರದ ಯೋಜನೆಯನ್ನು ಪಡೆದುಕೊಳ್ಳ ಬೇಕು ಎಂದರಲ್ಲದೆ, ನಿಮ್ಮ ಮನವಿಯಂತೆ ದೇಗುಲಕ್ಕೆ ಶೀಘ್ರದಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುವುದು ಜತೆಗೆ ದೇಗುಲಕ್ಕೆ ಬರುವ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಭಕ್ತರಿಗೆ ಅನುಕೂಲ ಮಾಡಲಾಗುವುದು ಅಷ್ಟೇ ಅಲ್ಲದೆ ಇಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದ ಅವರು. ಹಂತ ಹಂತವಾಗಿ ನಿಮ್ಮ ಗ್ರಾಮದ ಅಭಿವೃದ್ಧಿಗೆ ಕಂಕಣ ಬದ್ಧನಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಹೇಳಿದರು.

ಸಾಲಿಗ್ರಾಮ ತಾಲೂಕಿನ ದಿಡ್ಡಹಳ್ಳಿ ಗ್ರಾಮದ ಹೊರವಲಯದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಶ್ರೀ ದೊಡ್ಡಮ್ಮ ತಾಯಿ ದೇಗುಲವನ್ನು ಉದ್ಘಾಟಿಸಿ ಶಾಸಕ ಡಿ.ರವಿಶಂಕರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ದೇವಾಲಯದ ನಿರ್ಮಾಣಕ್ಕೆ ವೈಯಕ್ತಿಕಗಾಗಿ 22 ಲಕ್ಷ ರೂಗಳ ದೇಣಿಗೆ ನೀಡಿದ ಹಳಿಯೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಗಾರೆ ಕೃಷ್ಣ ಮತ್ತು ಮಾಜಿ ಉಪಾಧ್ಯಕ್ಷೆ ನಾಗಮ್ಮ ಕೃಷ್ಣೇಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪತ್ನಿ ಸುನಿತಾ ಡಿ. ರವಿಶಂಕರ್, ಮಾಜಿ ತಾ.ಪಂ ಅಧ್ಯಕ್ಷ ಹಾಡ್ಯ ಮಹದೇವ ಸ್ವಾಮಿ, ಗ್ರಾಮದ ಮುಖಂಡರಾದ ಪ್ರಸನ್ನ, ಪಾಲಕ್ಷ, ಮಹೇಂದ್ರ, ಪೈಲ್ವಾನ್ ರಾಜೇಗೌಡ, ತಮ್ಮಣ್ಣೇಗೌಡ,ಗಾರೆ ಗಣೇಶ್,ನಿಂಗರಾಜು,ಪ್ರಭು, ಗೋಪಾಲೇಗೌಡ, ಬಾಚಹಳ್ಳಿ ಮಹದೇವ್, ಶಿಕ್ಷಕ ಕುಮಾರ್, ಮುಖಂಡ ಸುರೇಶ್, ಕಾಂಗ್ರೇಸ್ ಮುಖಂಡರಾದ ಡೇರಿ ಮಾದು, ಹೊಸೂರು ರಮೇಶ್, ಪರುಶುರಾಮ್, ಚಿಕ್ಕಕ್ಕೊಪ್ಪಲು ಗಿರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಆಪ್ತ ಸಹಾಯಕ ನವೀನ್, ಪುನೀತ್ ಸೇರಿದಂತೆ ಗ್ರಾಮಸ್ಥರು ಇದ್ದರು.

RELATED ARTICLES
- Advertisment -
Google search engine

Most Popular