ಶ್ರೀರಂಗಪಟ್ಟಣ : ಚಲಿಸುತ್ತಿದ್ದ ಟ್ರಾಕ್ಟರ್‌ನಿಂದ ಬಿದ್ದ ವೇಳೆ ಟ್ರಾಕ್ಟರ್ ಚಕ್ರ ಹರಿದು ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯ ಶ್ರೀಸಾಯಿ ಅನಾಥಶ್ರಮದ ಬಳಿ ನಡೆದಿದೆ. ಪಟ್ಟಣದ ಗೋಸೇಗೌಡರ ಬೀದಿಯ ನಿವಾಸಿ ಶಿವರಾಮು (೫೨) ಮೃತಪಟ್ಟ ಕಾರ್ಮಿಕ. ಪಶ್ಚಿಮವಾಹಿನಿಯಿಂದ ಕೆಲಸ ಮುಗಿಸಿ ಟ್ರಾಕ್ಟರ್ ನೊಂದಿಗೆ ಮನೆಗೆ ವಾಪಾಸಾಗುತ್ತಿದ್ದ ವೇಳೆ ಬೈಕ್ ಅಡ್ಡಲಾದ ಹಿನ್ನೆಲೆ ಟ್ರಾಕ್ಟರ್ ಬ್ರೇಕ್ ಒತ್ತಿದಾಗ ಆಯಾ ತಪ್ಪಿ ಬಿದ್ದು ಘಟನೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಕಟ್ಟಡ ಕಾರ್ಮಿಕರ ಸಂಘದ ಸದಸ್ಯರಾದ ಶಿವರಾಮ್ ಅವರಿಗೆ ಪತ್ನಿ, ಒಂದು ಗಂಡು ಹಾಗೂ ಓರ್ವ ಹೆಣ್ಣು ಮಕ್ಕಳಿದ್ದಾರೆ.
ಆಯಾ ತಪ್ಪಿ ಬಿದ್ದ ಶಿವರಾಮ್ ಅವರನ್ನು ಸ್ಥಳೀಯರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಆಟೋದಲ್ಲಿ ಸಾಗಿಸಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗದೆ ಕೊನೆಯುಸಿರೆಳಿದಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು,ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



