Tuesday, April 22, 2025
Google search engine

Homeರಾಜ್ಯಬಿಎಂಐಸಿ ಯೋಜನೆ ಕೈಬಿಡುವಂತೆ ಸದನದ ಮೂಲಕ ಸರ್ಕಾರಕ್ಕೆ ಮನವಿ: ಶಾಸಕ ಕೆ.ಎಂ. ಉದಯ್

ಬಿಎಂಐಸಿ ಯೋಜನೆ ಕೈಬಿಡುವಂತೆ ಸದನದ ಮೂಲಕ ಸರ್ಕಾರಕ್ಕೆ ಮನವಿ: ಶಾಸಕ ಕೆ.ಎಂ. ಉದಯ್

ಮದ್ದೂರು: ಮದ್ದೂರಿನಲ್ಲಿ ಜಾರಿಯಲ್ಲಿರುವ ಬಿಎಂಐಸಿ ಯೋಜನೆಯನ್ನು ಕೈಬಿಡುವಂತೆ ಸದನದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದು, ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದು ಶಾಸಕ ಕೆ.ಎಂ. ಉದಯ್ ಹೇಳಿದರು.

ತಾಲೂಕಿನ ಹೆಬ್ಬೆರಳು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರು ಪಟ್ಟಣದ ವ್ಯಾಪ್ತಿಗೆ ಬಿಎಂಐಸಿ ಯೋಜನೆ ಅನ್ವಯಿಸುತ್ತಿರುವುದರಿಂದ ಪಟ್ಟಣದ ನಿವಾಸಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಸಮಸ್ಯೆಗಳನ್ನು ತಪ್ಪಿಸುವ ಸಲುವಾಗಿ ಸದನದ ಮೂಲಕ ಸರ್ಕಾರದ ಗಮನವನ್ನು ಸೆಳೆದಿದ್ದೇನೆ ಎಂದರು.

ತಾಲೂಕಿನ ಕೊನೆ ಭಾಗಕ್ಕೆ ನಾಲೆಗಳ ಮೂಲಕ ನೀರು ತಲುಪುತ್ತಿಲ್ಲ.‌ ಆದ್ದರಿಂದ ತಾಲೂಕಿನ ನಾಲೆಗಳನ್ನು ಆಧುನಿಕರಣ ಗೊಳಿಸಲು ಅಗತ್ಯ ಅನುದಾನ ನೀಡುವಂತೆ ಸದನದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಬಿಜೆಪಿ ಶಾಸಕರು ಅನಗತ್ಯವಾಗಿ ಸದನದ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿದ್ದು, ನಮ್ಮ ಕ್ಷೇತ್ರದ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಅವಕಾಶ ನೀಡುತ್ತಿಲ್ಲ. ವಿರೋಧಪಕ್ಷದವರಿಗೆ ಅಭಿವೃದ್ಧಿ ಬೇಕಿಲ್ಲ, ಕೇವಲ ಅನಗತ್ಯ ಚರ್ಚೆಯಲ್ಲೇ ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿದ್ದು ಅದನ್ನು ಪರಿಹರಿಸಿವಂತೆ ಸದನದಲ್ಲಿ ಸರ್ಕಾರದ ಗಮನಕ್ಕೆ ತಂದು ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಲು ಶ್ರಮಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular