Monday, December 2, 2024
Google search engine

Homeಸ್ಥಳೀಯರಾತ್ರೋರಾತ್ರಿ ಪ್ರತಿಮೆ ಪ್ರತಿಷ್ಠಾಪನೆ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವಿರೋಧ

ರಾತ್ರೋರಾತ್ರಿ ಪ್ರತಿಮೆ ಪ್ರತಿಷ್ಠಾಪನೆ: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವಿರೋಧ

ಮೈಸೂರು: ನಗರದ ಗನ್‌ ಹೌಸ್ ವೃತ್ತದಲ್ಲಿ ಲಿಂಗೈಕ್ಯ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆಯನ್ನು ರಾತ್ರೋರಾತ್ರಿ ಪ್ರತಿಷ್ಠಾಪಿಸಿರುವುದಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಈ ಪ್ರತಿಮೆಯನ್ನು ರಾತ್ರಿ ವೇಳೆ ಪ್ರತಿಷ್ಠಾಪನೆ ಮಾಡಿರುವುದು ದುರದೃಷ್ಟಕರ ಸಂಗತಿ. ಪ್ರಬುದ್ಧ ಸಂಸ್ಥೆಯಿಂದ ಇಂತಹ ಕೆಲಸ ಸಮಂಜಸವಲ್ಲ. ಉದ್ದೇಶಿತ ಪ್ರತಿಮೆಗೆ ಸತತವಾಗಿ ವಿರೋಧ ತೋರಿದ ಸಾರ್ವಜನಿಕರಿಗೆ ಸ್ಪಂದಿಸಿ ಈ ಬಗ್ಗೆ ಪುನರ್ ವಿಮರ್ಶೆ ಮಾಡಲು ಮನವಿ ಕೂಡ ತಲುಪಿಸಿ ನನ್ನ ಬೆಂಬಲ ಸೂಚಿಸಿದ್ದೆ ಎಂದಿದ್ದಾರೆ.

ಪ್ರತಿಮೆ ಸ್ಥಾಪನೆ ಹಿನ್ನೆಲೆಯಲ್ಲಿ ಅರಸು ಸಮಾಜದ ಮುಖಂಡ ಅಮರನಾಥ ರಾಜೇ ಅರಸ್ ಸುದ್ದಿಗೋಷ್ಟಿ ನಡೆಸಿ ವಿರೋಧ ವ್ಯಕ್ತಪಡಿಸಿದರು.

ಮೈಸೂರು ಅರಮನೆ ಗನ್ ಹೌಸ್ ಬಳಿ ರಾತ್ರಿ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಶಿವರಾತ್ರಿ ಸ್ವಾಮಿಜಿ ಅವರ ಪುತ್ಥಳಿಯನ್ನು ರಾತ್ರಿ ವೇಳೆ ಕದ್ದುಮುಚ್ಚಿ ಇಟ್ಟು ಅವಮಾನ ಮಾಡಿದ್ದಾರೆ. ಜೆಎಸ್ ಎಸ್ ಸಂಸ್ಥೆಗೆ ಅವಮಾನ ಮಾಡಿದ್ದಾರೆ. ಯಾವುದೇ ಸ್ಪಷ್ಟ ದಾಖಲಾತಿ ಇಲ್ಲದೆ ಮೈಸೂರಿಗೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ ಎಂದರು.

RELATED ARTICLES
- Advertisment -
Google search engine

Most Popular