Monday, April 21, 2025
Google search engine

Homeಸ್ಥಳೀಯಶ್ರೀಗಳ ಪ್ರತಿಮೆಗೆ ಅವಮಾನ : ಅರಸು ಮಂಡಳಿ ಆಕ್ರೋಶ

ಶ್ರೀಗಳ ಪ್ರತಿಮೆಗೆ ಅವಮಾನ : ಅರಸು ಮಂಡಳಿ ಆಕ್ರೋಶ

ಮೈಸೂರು: ಅರಮನೆ ಬಳಿ ರಾತ್ರೋರಾತ್ರಿ ಶ್ರೀಗಳ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿ ಶ್ರೀಗಳಿಗೆ ಅಪಮಾನಿಸಿದ್ದು,
ಇದೆರ ವಿರುದ್ಧ ಹೋರಾಟ ನಡೆಸುವುದಗಿ ಅರಸು ಮಂಡಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಮರನಾಥ ರಾಜೇ ಅರಸ್ ಮಾತನಾಡಿ, ಜೆಎಸ್‌ಎಸ್ ಸಂಸ್ಥೆಗೆ ಅವಮಾನ ಮಾಡಿದ್ದಾರೆ. ಪ್ರತಿ ನಿರ್ಮಾಣಕ್ಕೆ ಯಾವುದೇ ಸ್ಪಷ್ಟ ದಾಖಲಾತಿ ಇಲ್ಲ. ಮೈಸೂರಿಗೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ. ರಾಜ ಮನೆ ತನದವರ ಪುತ್ಥಳಿ ಇಡೋದಕ್ಕೆ ಆಗುವುದಿಲ್ಲ ಎಂದರೆ, ಶ್ರೀ ಚಾಮುಂಡೇಶ್ವರಿ ಇಡಬೇಕು. ಇದನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡುತ್ತೇವೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ ಆದೇಶ ಪಾಲನೆ ಮಾಡಿಲ್ಲ. ನಾವು ನ್ಯಾಯುತವಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಇನ್ನೂ ಮಠ ಬೆಳೆದಿರುವುದು ಅರಮನೆಯಿಂದ ಹೊರತು ಮಠ ದಿಂದ ಅರಮನೆ ಬೆಳೆದಿಲ್ಲ ಅರಮನೆಗೆ ಮೋಸ ಆಗುತ್ತಿದೆ. ಕೋರ್ಟ್ ಆದೇಶ ಬಂದರೆ ಯಾವುದೇ ಪುತ್ಥಳಿ ನಿರ್ಮಾಣಕ್ಕೆ ನಾವು ಒಪ್ಪಿಕೊಳ್ಳುತ್ತೇವೆ. ಅದು ಹೊರತಾಗಿ ನಮ್ಮ ಹೋರಾಟ ಮುಂದುವರೆಸುತ್ತೇವೆಂದರು. ಶ್ರೀಧರ್ ರಾಜ್ ಅರಸು, ಶ್ರೀಕಾಂತ್ ರಾಜ್ ಅರಸು, ಜೈದೇವ್ ಅರಸು, ಗೋಷ್ಠಿಯಲ್ಲಿ ಹಾಜರಿದ್ದರು.

RELATED ARTICLES
- Advertisment -
Google search engine

Most Popular