ಮಂಡ್ಯ: ಹಿರಿಯ ನಟಿ ಲೀಲಾವತಿ ನಿಧನಕ್ಕೆ ಮಂಡ್ಯದ ರೈತ ಹಿತರಕ್ಷಣಾ ಸಮಿತಿಯ ಕಾವೇರಿ ಹೋರಾಟಗಾರರು ಸಂತಾಪ ಸೂಚಿಸಿದ್ದಾರೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ಕಾವೇರಿ ಧರಣಿ ಸ್ಥಳದಲ್ಲಿ ಹಿರಿಯ ನಟಿ ಲೀಲಾವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಕಳೆದ 96 ದಿನಗಳಿಂದ ಕಾವೇರಿ ಹೋರಾಟ ನಡೆಯುತ್ತಿದ್ದು , ಹಿರಿಯ ನಟಿ ಲೀಲಾವತಿ ನೆನಪಿನಲ್ಲಿ ಇಂದಿನ ಕಾವೇರಿ ಹೋರಾಟವನ್ನು ಆರಂಭಿಸಲಾಗಿದೆ.
ಕಾವೇರಿ ಧರಣಿ ಸ್ಥಳದಲ್ಲಿ ಲೀಲಾವತಿ ನಿಧನದಿಂದ ನಿರಾವಮೌನ ಆವರಿಸಿದೆ.

ಸೆ.25 ರಂದು ಕಾವೇರಿ ಹೋರಾಟದಲ್ಲಿ ಲೀಲಾವತಿ ಹಾಗೂ ಪುತ್ರ ವಿನೋಧ್ ರಾಜ್ ಭಾಗಿಯಾಗಿದ್ದರು.
ಇಳಿ ವಯಸ್ಸಿನಲ್ಲಿ ಕಾವೇರಿಗಾಗಿ ಲೀಲಾವತಿ ಧರಣಿ ಕುಳಿತ್ತಿದ್ದರು. ಕಾವೇರಿ ನಮ್ಮದು ಕಾವೇರಿಗಾಗಿ ಯಾರು ಕಣ್ಣಿರಾಕಬಾರದು ಎಂದಿದ್ದರು ಎಂದು ಲೀಲಾವತಿ ನೆನೆದು ಹೋರಾಟಗಾರರು ಭಾವುಕರಾದರು.
ಹೋರಾಟಗಾರ ನಾರಾಯಣ್ ಅವರ ಮಾತು ಹಾಗೂ ಅವರ ಸಹಿಯನ್ನು ನೆನಪಿಸಿಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ನಟಿ ಲೀಲಾವತಿ ಸಹಿ ಹಾಕಿದ್ದರು.